Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಯಾದಗಿರಿ ಜಿಲ್ಲೆ ಅಂಗನವಾಡಿ ನೇಮಕಾತಿ 2026: 61 ಕಾರ್ಯಕರ್ತೆ ಹಾಗೂ 171 ಸಹಾಯಕಿಯರ ಹುದ್ದೆಗಳ ಸಂಪೂರ್ಣ ಮಾಹಿತಿ

ಪರಿಚಯ

ನನ್ನದೊಂದು ಸಣ್ಣ ಪರಿಚಯ ನನ್ನ ಹೆಸರು ಸಂಗಮೇಶ ಹಾವೇರಿ ಊರು ನಮ್ಮದು ಯಾದಗಿರಿ ಜಿಲ್ಲೆಯ ಈಗಿನ ಹುಣಸಗಿ ತಾಲುಕಿನಲ್ಲಿ ಬರುವ ದ್ಯಾಮನಹಾಳ ಗ್ರಾಮದಲ್ಲಿ ವಾಸವಾಗಿರುತ್ತೇನೆ. ನನ್ನ Online Shop ಇರೋದು ನಮ್ಮ ಊರಿಂದ 2 ಕೀ.ಮೀ ದಲ್ಲಿ ಇರುವ ಬಲಶೆಟ್ಟಿಹಾಳ ಗ್ರಾಮದಲ್ಲಿ ಇರುತ್ತದೆನಾನು ದಿನಾಲು ನಮ್ಮ Online ಸೇವಾ ಕೇಮದ್ರದಲ್ಲಿ  70 ರಿಂದ 100 ಅರ್ಜಿಗಳನ್ನು ಹಾಕಿರುತ್ತೇನೆ. ನನಗೆ ಯಾವ ರೀತಿ ಅರ್ಜಿಗಳನ್ನ ಹಾಕಬೇಕು ಎಂಬುವದರ ಬಗ್ಗೆ ಸಂಪೋರ್ಣ ಮಾಹಿತಿ ಇದೆ, Documents Scan ಮಾಡುವುದು, ಪೋಟೋ ಪ್ರಿಂಟ್ ತೆಗೆಯುವುದು, ಸಹಿ, ದಾಖಲೆಗಳ ಅಳತೆ,  Documents ಯಾವ Format ಅಲ್ಲಿ ಅಂದರೆ pdf, jpeg, Png ನಾವು ಯಾವ Format ಅಲ್ಲಿ ಕೇಳಿರ್ತಾರೊ ಅದೇ Format ಅಲ್ಲಿ ಮಾಡಿ ಅರ್ಜಿಗಳನ್ನ ಹಾಕುತ್ತೇವೆ, ಯಾವುದೇ ಕಾರಣಕ್ಕು ಇಲ್ಲಿವರೆಗೂ ನಾವು ನಮ್ಮಲ್ಲಿ ಬರುವ ಒಬ್ಬ ಗ್ರಾಹಕರ ಯಾವುದೇ ಅರ್ಜಿಗಳನ್ನ ತಪ್ಪಾಗಿ ಹಾಕಿರುವುದಿಲ್ಲಾ  ಅಷ್ಟೊಂದು Carefull ಆಗಿ ಹಾಕಿಕೋಡುತ್ತೇವೆ, ಮತ್ತು ಅರ್ಜಿ ಹಾಕಿದ ಮೇಲೆ online Payment ಕೂಡಾ ನಾವೆ ಮಾಡಿಕೊಡುತ್ತೇವೆ ಒಂದುವೇಳೆ ಅರ್ಜಿದಾರರ ಹತ್ತಿರ ಯಾವುದೇ payment option ಇಲ್ಲಾ ಅಂದಾಗ ಮಾತ್ರ ಅವರಿಂದ ಫೀ ಎಷ್ಟಿರುತ್ತೋ ಅವರ ಹಾತ್ತಿರ ಇಸ್ಗೊಂಡು  ನಮ್ಮ ದೇ ಆದ card,online,UPI,Credit card ಗಳಿಂದ payment ಮಾಡಿ ಅವರಿಗೆ ಅರ್ಜಿ ಫಾರ್ಮ ಕೊಡುತ್ತೆವೆ, ನಿಮಲ್ಲಿ ಯಾರಿಗಾದರು ನಮ್ಮಿಂದ ಸೇವೆ ಬಯಸಿದರೆ ಹಾಕಿ ಕೊಡಲು ಸಂಪೂರ್ಣ ಉಚಿತವಾಗಿ ಅರ್ಜಿಗಳನ್ನ ಹಾಕಿ ಕೊಡಲಾಗುತ್ತದೆ. ಅರ್ಜಿ ಸುಲ್ಕ ಮತ್ತು Bank service charge ಇದನ್ನ ಮಾತ್ರ ತೆಗೆದುಕೊಳ್ಳೊದು. ಇದಕ್ಕೆ ನೀವು ಮಾಡಬೇಕಾಆಗಿರೊದು ಏನು ಅಂದ್ರೆ ನನ್ನ E-mail ಅಥವಾ Whatsapp ನಂಬರಿಗೆ ಬೇಕಾಗುವ ದಾಖಲೆಗಳನ್ನ xerox copy ಕಳಿಸಿಕೊಟ್ಟರೆ ಸಾಕು ನಾನೆ ಅರ್ಜಿಗಳನ್ನ ಹಾಕಿ ಕೊಡುತ್ತೇನೆ. ಇದಕ್ಕೆ ಯಾವುದೇ ರೀತಿಯಾದಂತ ಚಾರ್ಜ್ ಇರುವುದಿಲ್ಲಾ,    ನನ್ನ ನಂಬರ 9071322058 / 7259752321 E-mail Id- sangamesh.haveri@gmail.com. 

ದಯವಿಟ್ಟು ಕನ್ನಡ ಅಭಿಮಾನಿಗಳಿಗೆ ನನ್ನದೊಂದು ಮನವಿ ಇದು ನನ್ನ ಮೊದಲನೇ ಸಲಾ ಕನ್ನಡದಲ್ಲಿ Article ಬರೆಯುತ್ತಾ ಇರೋದು ಇದರಲ್ಲಿ ಏನಾದ್ರು ವ್ಯಾಕರಣ ತಪ್ಪಾಗಿದ್ದರೆ ಕ್ಷಮೆ ಇರಲಿ, ಇದೆ ತರಾ ಇನ್ನು ಹೆಚ್ಚು Articles ಬರೆಯುವದಕ್ಕೆ ನಿಮ್ಮ ಪ್ರೋತ್ಸಾಹ ನನಗೆ ಅತ್ಯಅಮುಲ್ಯವಾದದ್ದು ನನ್ನಂತಹ ಬಡ ಯುವಕರಿಗೆ ನಿಮ್ಮಂತಹ ಒಳ್ಳೆ ಮನಸಿನಿಂದ ಆಶಿರ್ವಾದ ಬೇಕು ದಯವಿಟ್ಟು ಈ Content ಇಷ್ಟ ಆಗಿದ್ದರೆ Follow , Share, Like, Comment ಮಾಡಿ ತುಂಬಾ ಪುಣ್ಯ ಬರುತ್ತೆ ಎಂದು ಹೇಳುತ್ತಾ ನಿಮಗೂ ನಿಮ್ಮ ಕುಟುಂಬದವಿರಿಗೂ ಆ ದೇವರು ಒಳ್ಳದನ್ನೆ ಮಾಡಲಿ ಎಂದು ಹಾರೈಸುತ್ತೇನೆ .

ನಮಸ್ಕಾರ ಇದು ನನ್ನ ಉದ್ಯೋಗ ಮಿತ್ರ ಇದರಲ್ಲಿ ಜಾಬ್ಸ್ ಗೆ ಸಂಬಂದ ಪಟ್ಟ ಮಾಹಿತಿ ಬರ್ತಾ ಇರುತ್ತೆ ಯಾರಿಗೆ ಅವಶ್ಯಕತೆ ಇರುತ್ತದೆಯೊ ಅವರು ನಮ್ಮ ಗ್ರೂಪ್ ಗೆ ಸೇರಿಕೊಳ್ಳಬಹುದು.

ಯಾದಗಿರಿ ಜಿಲ್ಲೆಯ ಮಹಿಳೆಯರಿಗೆ ಗುಡ್ ನ್ಯೂಸ್..! ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಕರೀದಿದ್ದಾರೆ.

ವಿಷೇಶ ಸೂಚನೆ: ನಮಸ್ಕಾರ ಎಲ್ಲಾ ನಮ್ಮ ಹುಣಸಗಿ, ಶೋರಾಪುರ ,ಯಾದಗಿರಿ ಮತ್ತು ನಮ್ಮ ಕರ್ನಾಟಕದಲ್ಲಿರುವಂತಹ ಎಲ್ಲಾ ಮಹಿಳಾ ಕಣ್ಮಣಿಗಳಿಗೆ ಈ ಅಂಗನವಾಡಿ ಹುದ್ದೆಗೆ ಯಾರು ಅರ್ಹರು ಅನ್ನೊದನ್ನ ನಿಮಗೆ ಹೇಳುತ್ತೇನೆ.

ಈ ಹುದ್ದೆಗೆ ಅಲ್ಲಿರುವ ಸ್ಥಳಿಯ ಮಹಿಳೆಯರಿಗೆ ಮಾತ್ರ ಅಂದ್ರೆ ಯಾವ ಊರಿನಲ್ಲಿ ಹುದ್ದೆ ಖಾಲಿ ಇದೆ ಅಂತ ಅರ್ಜಿ ಕರೆದಿದ್ದಾರ ನೋಡಿ ಆ ಊರಿನ ವಿಧ್ಯಾಭ್ಯಾಸ ಮಾಡಿರುತ್ತಾರೆ ನೋಡಿ ಆ ಮಹಿಳೆಯರು ಇದಕ್ಕೆ ಅರ್ಜಿ ಹಾಕಬೇಕು ಬೇರೆ ಊರಿನವರು ಅರ್ಜಿ ಹಾಕಕ ಬರಲ್ಲಾ, ಒಂದು ವೇಳೆ  ಆ ಊರಿನಲ್ಲಿ ಯಾರು ಈ ಹುದ್ದೆಗೆ ಅರ್ಜಿ ಹಾಕದೆ ಇದ್ದಾಗ ಅಲ್ಲಿನ ಊರಿನ ಪ್ರಮುಕರನ್ನು ವಿಚಾರಿಸಿ ಇಲ್ಲಾ ಪಂಚಾಯತ ಕಡೆಯಿಂದ ವಿಚಾರಿಸಿ  ಊರಿನಲ್ಲಿ ಯಾರಾದ್ರು ಅಂಗನವಾಡಿ ಹುದ್ದೆಗೆ ಅರ್ಹರು ಇದ್ದಾರೊ ಇಲ್ಲಾ ಅಂತ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಅವರರಿಂದ ಅನುಮತಿ ಪಡೆದು ನಂತರ ಆ ಮಾಹಿತಿಯನ್ನ ಮೇಲಾಧಿಕಾರಿಗಳಿಗೆ ಸಂದೇಶ ಕಳಿಸುತ್ತಾರೆ ಮೇಲಾಧೀಕಾರಿಗಳ ಆದೇಶ ಬರುವವರೆಗೆ ಕಾಯಬೇಕಾಗುತ್ತದೆ, ಮತ್ ನಮ್ಮ ತಾಲೂಕಿನ ಶಾಸಕರು ಕೂಡಾ ಅನುಮತಿ ಕೊಡಬೇಕುತ್ತದೆ, ಈ ಆದೇಶದಲ್ಲಿ ಬೇರೆಯವರಿಗೆ ಅವಕಾಶ ಕೊಡಿ ಅಂತ ಬರುತ್ತದೆ ಬೇರೆ ಊರಿನವರಿಗೆ ಅವಕಾಶ ಸಿಗುತ್ತದೆ. ಮತ್ತ್ ಇದನ್ನ ಮೇರಿಟ್ ಆದಾರದ ಮೇಲೆ ಆಯ್ಕೆ ಮಾಡ್ತಾರಾ, ಅಂದರ ಅರ್ಜಿ ಯಾರ ಹಾಕಿರ್ತಾರ ನೋಡಿ ಅವರಲ್ಲಿ ಹೆಚ್ಚು ಅಂಕಗಳು ಯಾರ ತಗೊಂಡಿರುವವರಿಗೆ ಮಾತ್ರ ಈ ಚಾನ್ಸು ನೋಡ್ರಿ. ಆ ಊರಿಗೆ ಸಂಬಂದ ಪಟ್ಟವರೇ ಅರ್ಜಿ ಹಾಕಬೇಕು, ಆ ಊರಿನವರಿಗೆ ಯಾವ ಜಾತಿಗೆ ಮಿಸಲಾತಿ ಬಿಟ್ಟಾರ ಅಲ್ಲಿ ಬಿಟ್ಟಿರುವ ಜಾತಿಯವರಿಗೆ ಮಾತ್ರ ಈ ಹುದ್ದೆ ಸಿಗುತ್ತದೆ, ಬೇರೆಯವರಿಗೆ ಸಿಗಲ್ಲಾ ಯಾರು ಕೂಡಾ ಅರ್ಜಿ ಹಾಕಬೇಡಿ ಸರಕಾರ ಏನ ಸೂಚನೆ ಹೊರಡಿಸಿರುತ್ತಾರೆ ನೋಡಿ ಅದರ ಮಿಸಲಾತಿ ಒಳಗ ಬರ್ತಿದ್ದರಿ ಅಂದ್ರ ಅರ್ಜಿ ಸಲ್ಲಿಸಿರಿ, ಆ ಊರಿನಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು ಅಂತವರು ಅರ್ಜಿ ಹಾಕೋಕೆ ಬರುತ್ತದೆ, ಒಂದುವೇಳೆ ನೀವು ಅದೇ ಊರಿನವರಾಗಿದ್ದು ಈಗ ಮದುವೆ ಮಾಡಿಕಂಡು ಬೇರೆ ಊರಿಗೆ ಹೊಗಿದ್ರಿ ಅಂದ್ರ ಅರ್ಜಿ ಹಾಕೋಕೆ ಬರಲ್ಲಾ ನೆನಪಿರಲಿ ನೀವೇನಿದ್ದರು ನಿಮ್ಮ ಗಂಡನ ಮನೆ ಕಡೆ ಊರಲ್ಲಿ ಏನಾದ್ರು ಅರ್ಜಿ ಕರೆದಿದ್ದರೆ ನೋಡಿ ಹಾಕಿ ಆದರೆ ನಿಮ್ಮ ತವರು ಮನೆಯಲ್ಲಿ ಹಾಕೊಕೆ ಬರಲ್ಲಾ ಗಂಡನ ಮನೆ ತವರು ಮನೆ ಅದೇ ಊರು ಆಗಿತ್ತು ಅಂದ್ರ ಅರ್ಜಿ ಹಾಕಕ ಬರ್ತಾದ ಇಲ್ಲಾಂದ್ರ ಬರಲ್ಲಾ. ದಯವಿಟ್ಟು ಯಾರು ಅಡ್ಡ ದಾರಿ ತುಳಿಯೊಕೆ ಹೋಗಬೇಡಿ ಯಾರು ಕಷ್ಟಪಟ್ಟು ಓದಿರ್ತಾರೆ ನೋಡಿ ಅವರಿಗೆ ಅವಕಾಶ ಮಾಡಿ ಕೊಡಿ ನಿಮ್ಮ ತರಾನೆ ಅವರು ಕಷ್ಟಪಟ್ಟು ಓದಿ ಒಳ್ಳೆ ಅಂಕ ತಗೊಂಡಿರ್ತಾರೆ ಅಲ್ವಾ ಬೇರೆಯವರು ಹೇಳ್ತರ್ತಾರೆ ನೋಡಿ ನನಗೆ ಶಾಸಕರು ಗೊತ್ತು ಅವರು ಗೊತ್ತು ಇವರು ಗೊತ್ತು ಅಂತ ಬಾಯಿ ಬಿಡ್ತರ್ತಾರೆ ನೋಡಿ ಅವರಿಗೆ ನನ್ನ ಈ ಮಾತು ಹೇಳೊದು ಅಷ್ಟೇ ರೀ……..ಎಲ್ಲಾ ನನ್ನ ಸಹೋದರಿಯರಿಗೆ ಒಳ್ಳೆದಾಗಲಿ ಈ ಹುದ್ದೆ ನಿಮ್ಮ ಪಾಲಿಗೆ ಬರಲಿ ಹಾಗೆ ಒಳ್ಳೆ ಹೆಸರು ತರುವಂತ ಕೆಲಸ ಮಾಡಿ ಎಂದು ಹೇಳುತ್ತಾ ನನ್ನ ಮಾತು ಮುಗಿಸುತ್ತೇನೆ.

ಪ್ರಸ್ತಾವನೆ

ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ನೇಮಕಾತಿಯನ್ನು ಸರ್ಕಾರದ ಆದೇಶಗಳ ಪ್ರಕಾರ ನಡೆಸಲಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳು, ತಿದ್ದುಪಡಿಗಳು ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಬಂಧಿಸಿದ ಸರ್ಕಾರದ ಆದೇಶಗಳು ಹಾಗೂ ನೇಮಕಾತಿ ನಿಯಮಗಳನ್ನು ಓದಿ ತಿಳಿದುಕೊಳ್ಳಬೇಕು. ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಯಾದಗಿರಿ ಜಿಲ್ಲೆಯ ಮಹಿಳೆಯರಿಗೆ ಒಂದು ಒಳ್ಳೆಯ ಅವಕಾಶ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ವತಿಯಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಹಾಕಲು ಅಧಿಸೂಚನೆ ಹೊರಡಿಸಿದ್ದಾರೆ.

ಈ ನೇಮಕಾತಿ ಸರ್ಕಾರದ ಆದೇಶದ ಪ್ರಕಾರ ನಡೆಯಲಿದ್ದು, ಯಾದಗಿರಿ ಜಿಲ್ಲೆಯ 4 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೀತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಮೊಬೈಲ್‌ನಲ್ಲೇ ಹೇಗೆ ಕೆಲಸ ಮಾಡುತ್ತಾರೆ?

ಇವತ್ತಿನ ದಿವಸ ನಮ್ಮ ಅಂಗನವಾಡಿ ಕೇಂದ್ರದಾಗ ಕಾರ್ಯಕರ್ತೆಯರ ಕೆಲಸ ಬರೀ ರಿಜಿಸ್ಟರ್‌ನಲ್ಲಿ ಬರೆಯೋದು ಮಾತ್ರ ಅಲ್ಲಪ್ಪಾ. ಸರ್ಕಾರದಿಂದಲೇ ಒಂದು  ಸ್ಮಾರ್ಟ್‌ಫೋನ್ ಕೊಡ್ತಾರೆ. ಆ ಮೊಬೈಲ್‌ನಲ್ಲಿರುವ ಸರ್ಕಾರಿ ಆಪ್ ಮೂಲಕ ದಿನನಿತ್ಯದ ಬಹುತೇಕ ಕೆಲಸ ಮಾಡ್ಬೇಕಾಗುತ್ತೆ.

ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಬಂದ್ಮೇಲೆ ಮಕ್ಕಳ ಹಾಜರಾತಿಯಿಂದ ಶುರು ಮಾಡಿ, ಮಕ್ಕಳ ತೂಕ, ಎತ್ತರ, ಗರ್ಭಿಣಿಯರ ಮಾಹಿತಿ, ಬಾಣಂತಿಯರ ವಿವರ, ಪೌಷ್ಟಿಕ ಆಹಾರ ವಿತರಣೆ, ಮನೆ ಭೇಟಿ, ಲಸಿಕೆ ಮಾಹಿತಿ, ಆರೋಗ್ಯ ತಪಾಸಣೆ ಸೇರಿದಂತೆ ಪ್ರತಿಯೊಂದು ಕೆಲಸವನ್ನೂ ಮೊಬೈಲ್‌ನಲ್ಲೇ ಎಂಟ್ರಿ ಮಾಡ್ಬೇಕಾಗುತ್ತೆ.

ಸರ್ಕಾರ ಕೊಟ್ಟ ಮೊಬೈಲ್‌ನಲ್ಲಿ ಯಾವ ಮಗು ಎಷ್ಟು ತೂಕ ಇದೆ, ಯಾವ ಮಗುವಿಗೆ ಲಸಿಕೆ ಬಾಕಿ ಇದೆ, ಯಾವ ಗರ್ಭಿಣಿಗೆ ತಪಾಸಣೆ ಮಾಡ್ಬೇಕು, ಯಾರಿಗೆ ಪೌಷ್ಟಿಕ ಆಹಾರ ಕೊಡಲಾಗಿದೆ ಅನ್ನೋ ಮಾಹಿತಿ ಎಲ್ಲಾ ಆನ್‌ಲೈನ್‌ನಲ್ಲಿ ದಾಖಲಿಸಬೇಕು.

ಅಂಗನವಾಡಿ ಕಾರ್ಯಕರ್ತೆ ದಿನದ ಕೆಲಸ ಮುಗಿದ್ಮೇಲೆ ಆ ದಿನ ಮಾಡಿದ ಎಲ್ಲಾ ಚಟುವಟಿಕೆಗಳನ್ನು ಮೊಬೈಲ್‌ನ ಸರ್ಕಾರಿ ಆಪ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಈ ಮಾಹಿತಿ ನೇರವಾಗಿ ಮೇಲಾಧಿಕಾರಿಗಳ ಕಚೇರಿಗೆ ಹೋಗುತ್ತೆ. ಹೀಗಾಗಿ ಯಾವ ಕೇಂದ್ರದಲ್ಲಿ ಏನು ಕೆಲಸ ಆಗಿದೆ ಅನ್ನೋದನ್ನ ಅಧಿಕಾರಿಗಳು ಕೂಡಲೇ ನೋಡಬಹುದು.

ಹಿಂದೆ ದೊಡ್ಡ ದೊಡ್ಡ ರಿಜಿಸ್ಟರ್‌ಗಳಲ್ಲಿ ಬರೆಯುತ್ತಿದ್ದ ಕೆಲಸಗಳಲ್ಲೇ ಈಗ ಹೆಚ್ಚಿನ ಭಾಗ ಮೊಬೈಲ್ ಮೂಲಕ ಡಿಜಿಟಲ್ ಎಂಟ್ರಿ ಆಗ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಬಳಸೋದು, ಸರ್ಕಾರಿ ಆಪ್‌ನಲ್ಲಿ ಮಾಹಿತಿ ತುಂಬೋದು, ಇಂಟರ್ನೆಟ್ ಬಳಕೆ, ಡೇಟಾ ಅಪ್‌ಲೋಡ್ ಮಾಡೋದು ಗೊತ್ತಿರೋದು ತುಂಬಾ ಮುಖ್ಯ.

ಒಟ್ಟಾರೆ ಹೇಳೋದಾದ್ರೆ, ಇವತ್ತಿನ ಅಂಗನವಾಡಿ ಕಾರ್ಯಕರ್ತೆಯ ಕೆಲಸದಲ್ಲಿ ಮೊಬೈಲ್ ಪ್ರಮುಖ ಸಾಧನವಾಗಿದೆ. ಸರ್ಕಾರ ಕೊಟ್ಟ ಅಧಿಕೃತ ಮೊಬೈಲ್‌ನಲ್ಲೇ ಪ್ರತಿದಿನದ ಕೆಲಸದ ಮಾಹಿತಿ ದಾಖಲಿಸಿ, ಸರ್ಕಾರಕ್ಕೆ ಆನ್‌ಲೈನ್ ಮೂಲಕ ಕಳುಹಿಸಬೇಕಾಗುತ್ತದೆ. ಇದರಿಂದ ಕೆಲಸದಲ್ಲಿ ಪಾರದರ್ಶಕತೆ ಬರುತ್ತದೆ, ಮಕ್ಕಳ ಹಾಗೂ ಗರ್ಭಿಣಿಯರ ಮಾಹಿತಿಯೂ ಸುರಕ್ಷಿತವಾಗಿ ಸರ್ಕಾರದ ದಾಖಲೆಗಳಲ್ಲಿ ಉಳಿಯುತ್ತದೆ.

ಅಂಗನವಾಡಿ ಕಾರ್ಯಕರ್ತೆಯರು ಯಾವ App ಬಳಸುತ್ತಾರೆ ಅಂತಾ ಗೊತ್ತಾ? ನಾನ ನಿಮಗೆ ಪೂರ್ತಿಯಾಗಿ ವಿವರಣೆ ಕೊಡ್ತಾ ಇದಿನಿ ಯಾರು ಕೂಡಾ ಇಷ್ಟೊಂದು ಮಾಹಿತಿ ನಿಮಗೆ ಯಾರು ಹೇಳಿ ಕೋಡೊದಿಲ್ಲಾ…ನೀವು ಕೂಡಾ ಇದರ ಮಾಹಿತಿಯನ್ನ ನಿಮ್ಮ ಅಕ್ಕಾ ಪಕ್ಕದವರಿಗೆ ಇದರ ಬಗ್ಗೆ ಮಾಹಿತಿ ಕೊಡಿ.

ಅಂಗನವಾಡಿ ಕಾರ್ಯಕರ್ತೆಯರು ಇವತ್ತು ಬಹುತೇಕ ಎಲ್ಲಾ ಕೆಲಸವನ್ನ ಸರ್ಕಾರ ನೀಡಿರುವ “Poshan Tracker App” ಮೂಲಕನೆ ಮಾಡ್ತಾರೆ ಮಾಡಬೇಕು.

Poshan Tracker App ಅನ್ನು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (Ministry of Women & Child Development) ಅಭಿವೃದ್ಧಿಪಡಿಸಿದೆ. ಈ ಆಪ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಬರುವ 0 ರಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರ ಮಾಹಿತಿಯನ್ನು ದಾಖಲಿಸಬೇಕು.

Poshan Tracker App‌ನಲ್ಲಿ ಮಾಡೋ ಮುಖ್ಯ ಕೆಲಸಗಳು

  • ಮಕ್ಕಳ ಹೊಸ ನೋಂದಣಿ ಮಾಡೋದು.
  • ಗರ್ಭಿಣಿಯರ ಹೆಸರು ಮತ್ತು ಆರೋಗ್ಯ ಮಾಹಿತಿ ದಾಖಲಿಸೋದು.
  • ಬಾಣಂತಿಯರ ವಿವರ ಸೇರಿಸೋದು.
  • ಮಕ್ಕಳ ತೂಕ ಮತ್ತು ಎತ್ತರವನ್ನು ದಾಖಲಿಸೋದು.
  • ಅಪೌಷ್ಟಿಕ ಮಕ್ಕಳನ್ನು ಗುರುತಿಸೋದು.
  • ಪೌಷ್ಟಿಕ ಆಹಾರ ವಿತರಣೆ ಮಾಹಿತಿ ಎಂಟ್ರಿ ಮಾಡೋದು.
  • ಮನೆ ಮನೆ ಭೇಟಿ ಮಾಡಿದ ಮಾಹಿತಿ ದಾಖಲಿಸೋದು.
  • ಅಂಗನವಾಡಿ ಕೇಂದ್ರದ ದೈನಂದಿನ ಹಾಜರಾತಿ ದಾಖಲಿಸೋದು.
  • ಸರ್ಕಾರ ಕೇಳುವ ವರದಿಗಳನ್ನು ಆನ್‌ಲೈನ್‌ನಲ್ಲಿ ಕಳುಹಿಸೋದು.

ಸರ್ಕಾರದಿಂದ ಮೊಬೈಲ್ ಕೊಡ್ತಾರಾ?

ಹೌದು. ಹಲವು ರಾಜ್ಯಗಳಲ್ಲಿ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಅಧಿಕೃತ ಸ್ಮಾರ್ಟ್‌ಫೋನ್ ನೀಡಲಾಗಿದೆ. ಆ ಮೊಬೈಲ್‌ನಲ್ಲೇ Poshan Tracker App ಇರುತ್ತದೆ. ಅದರಲ್ಲಿ ಪ್ರತಿದಿನದ ಕೆಲಸದ ಮಾಹಿತಿಯನ್ನು ದಾಖಲಿಸಬೇಕು. ಅಧಿಕಾರಿಗಳು ಕೂಡ ಇದೇ ಆಪ್ ಮೂಲಕ ಕೇಂದ್ರದ ಕೆಲಸವನ್ನು ಪರಿಶೀಲಿಸುತ್ತಾರೆ.

ಸರಳವಾಗಿ ಹೇಳಬೇಕಂದ್ರೆ, ಇವತ್ತಿನ ಅಂಗನವಾಡಿ ಕಾರ್ಯಕರ್ತೆಯ ಕೆಲಸದಲ್ಲಿ “Poshan Tracker App” ಬಹಳ ಮುಖ್ಯ. ಮಕ್ಕಳಿಂದ ಹಿಡಿದು ಗರ್ಭಿಣಿಯರವರೆಗಿನ ಬಹುತೇಕ ಎಲ್ಲಾ ಮಾಹಿತಿಯನ್ನು ಈ ಆಪ್‌ನಲ್ಲೇ ದಾಖಲಿಸಿ ಸರ್ಕಾರಕ್ಕೆ ಕಳುಹಿಸಬೇಕಾಗುತ್ತದೆ.

ಕಿಶೋರಿಯರು ಅಂದ್ರೆ ಯಾರು?

ಬಹಳ ಜನರಿಗೆ ಕಿಶೋರಿಯರು ಅಂದ್ರೆ ಯಾರು ಅಂತ ಗೊತ್ತಿರಲ್ಲ. ಸರಳವಾಗಿ ಹೇಳಬೇಕಂದ್ರೆ, 10 ವರ್ಷದಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳನ್ನೇ ಕಿಶೋರಿಯರು ಅಂತ ಕರೀತಾರೆ.

ಅಂದ್ರೆ ಶಾಲೆಯಲ್ಲಿ ಓದುತ್ತಿರೋ 6ನೇ ತರಗತಿಯಿಂದ ಪಿಯುಸಿ ಅಥವಾ ಕಾಲೇಜಿನ ಆರಂಭದ ವಯಸ್ಸಿನ ಹುಡುಗಿಯರು ಈ ವರ್ಗಕ್ಕೆ ಬರುತ್ತಾರೆ.

ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಅವರ ದೇಹದಾಗ ಹಲವಾರು ಬದಲಾವಣೆಗಳು ಆಗುತ್ತವೆ. ಅದಕ್ಕೆ ಸರ್ಕಾರ ಇವರು ಅನುಬವಿಸುವ ನೊವನ್ನ ನೋಡಿ ಅಂಗನವಾಡಿ ಕೇಂದ್ರದ ಮೂಲಕ ಕಿಶೋರಿಯರ ಆರೋಗ್ಯದ ಮೇಲೆ ಯಾವುದೇ ರೀತಿಯ ಏನೂ ಅಡ್ಡ ಪರಿಣಾಮ ಬರಬಾರದು ಅಂತ ಅವರ ಮೇಲೂ ವಿಶೇಷ ಗಮನ ಕೊಡಕತ್ತದ. ನಮ್ಮ ಸರ್ಕಾರ ಎಷ್ಟು ಒಳ್ಳೆ ಕೆಲಸ ಅಲ್ಲಾ ನಮ್ಮ ಸರಕಾರದಿಂದ ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲ ಆಗ್ತಾದ ಅಲ್ವಾ ಇದರಿಂದ ಎಷ್ಟೋ ಬಡ ಹೆಣ್ಣು ಮಕ್ಕಳಿಗೆ ಇದರಿಂದ ತುಂಬಾನೆ ಉಪಯೋಗ ಆಗ್ತಾದ ಅಲ್ಲಾ ರೀ, ಈ ನೋವು ಬಂದರೆ ಅದರ ಖರ್ಚು ಜಾಸ್ತಿನೆ ಅಗೋದು ಅದಕ್ಕಾಗಿ ಈ ನಮ್ಮ ಸರಕಾರಕ್ಕೆ ನಮ್ಮ ಎಲ್ಲಾ ಹೆಣ್ಣು ಮಕ್ಕಳ ಪರವಾಗಿ ನನ್ನ ಕಡೆಯಿಂದ ತುಂಬಾ ಧನ್ಯವಾದಗಳು ಸರ್, ಹಿಗೇ ಇದೆ ತರಾ ಒಳ್ಳೆ ಕೆಲಸ ಮಾಡಿ ಅಂತಾ ನಮ್ಮ ಕರ್ನಾಟಕದ ಜನತೆಯ ಪರವಾಗಿ ನಿಮ್ಮಲ್ಲಿ ಕೆಳಿಕೊಳ್ಳುತ್ತೇನೆ.

 ಕಿಶೋರಿಯರಿಗೆ ಅಂಗನವಾಡಿ ಮೂಲಕ ಏನು ಮಾಡ್ತಾರೆ?

  • ರಕ್ತಹೀನತೆ (ಅನಿಮಿಯಾ) ಬಗ್ಗೆ ತಪಾಸಣೆ ಹಾಗೂ ಜಾಗೃತಿ ಇದರ ಬಗ್ಗೆ ಆ ಊರಿನವರಿಗೆ ಹೇಳೊದು ಇವರ ಕೆಲಸ.
  • ಪೌಷ್ಟಿಕ ಆಹಾರದ ಬಗ್ಗೆ ಸಲಹೆ ಕೊಡೊದು.
  • ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ.
  • ವೈಯಕ್ತಿಕ ಸ್ವಚ್ಛತೆ (Personal Hygiene) ಬಗ್ಗೆ ಅರಿವು.
  • ಋತುಚಕ್ರ (ಮಾಸಿಕ ಧರ್ಮ) ಸಮಯದಲ್ಲಿ ಹೇಗೆ ಆರೈಕೆ ಮಾಡಿಕೊಳ್ಳಬೇಕು ಅನ್ನೋ ಮಾಹಿತಿ.
  • ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ಬಗ್ಗೆ ಆರೋಗ್ಯ ಇಲಾಖೆಯ ಜೊತೆ ಸೇರಿ ಜಾಗೃತಿ.
  • ಓದು, ಆರೋಗ್ಯ ಮತ್ತು ಉತ್ತಮ ಜೀವನಶೈಲಿಯ ಬಗ್ಗೆ ಮಾರ್ಗದರ್ಶನ.

ಸರಳವಾಗಿ ಹೇಳಬೇಕಂದ್ರೆ, “10 ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳನ್ನೇ ಕಿಶೋರಿಯರು ಅಂತ ಕರೀತಾರೆ. ಇವರ ಆರೋಗ್ಯ ಚೆನ್ನಾಗಿರಲಿ, ರಕ್ತಹೀನತೆ ಬರಬಾರದು, ಪೌಷ್ಟಿಕ ಆಹಾರ ಸಿಗಲಿ, ಮುಂದೆ ಆರೋಗ್ಯವಂತ ಮಹಿಳೆಯರಾಗಲಿ ಅನ್ನೋ ಉದ್ದೇಶದಿಂದ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ವಿವಿಧ ಸೇವೆಗಳನ್ನು ನೀಡುತ್ತೆ.”

ಕಿಶೋರಿಯರು ಅಂದ್ರೆ ಯಾರು? ಈ ಹೆಸರು ಹೇಗೆ ಬಂತು? ಸಂಪೂರ್ಣ ಮಾಹಿತಿ

ನಮ್ಮೂರಲ್ಲಿ ಹಲವರು “ಕಿಶೋರಿಯರು ಅಂದ್ರೆ ಯಾರು?” ಅಂತ ಕೇಳ್ತಾರೆ. ಕೆಲವರಿಗೆ ಇದು ಸರ್ಕಾರಿ ಪದ ಅಂತ ಅನಿಸುತ್ತದೆ. ಆದರೆ ಇದು ಕನ್ನಡದಲ್ಲೇ ಬಹಳ ವರ್ಷಗಳಿಂದ ಬಳಸಲಾಗುತ್ತಿರುವ ಪದ.

“ಕಿಶೋರಿ” ಎಂಬ ಪದವು ಮೂಲತಃ ಸಂಸ್ಕೃತದ “ಕಿಶೋರ” (Kiśora) ಎಂಬ ಪದದಿಂದ ಬಂದಿದೆ. “ಕಿಶೋರ” ಅಂದ್ರೆ ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿರುವ ಹುಡುಗ. ಅದೇ ಪದದ ಸ್ತ್ರೀಲಿಂಗ ರೂಪವೇ “ಕಿಶೋರಿ”, ಅಂದ್ರೆ ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿರುವ ಹುಡುಗಿ.

ಇದರ ಬಹುವಚನ ರೂಪವೇ “ಕಿಶೋರಿಯರು”.

ಸರಳವಾಗಿ ಹೇಳಬೇಕಂದ್ರೆ, 10 ವರ್ಷದಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಕಿಶೋರಿಯರು ಎಂದು ಕರೆಯುತ್ತಾರೆ. ಈ ವಯಸ್ಸಿನಲ್ಲಿ ದೇಹ, ಮನಸ್ಸು ಮತ್ತು ಭಾವನೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅದಕ್ಕಾಗಿಯೇ ಈ ವಯಸ್ಸಿನ ಹುಡುಗಿಯರಿಗೆ ವಿಶೇಷ ಗಮನ ಕೊಡಬೇಕು ಎಂದು ವೈದ್ಯರು ಮತ್ತು ಸರ್ಕಾರ ಹೇಳುತ್ತವೆ.

ಸರ್ಕಾರ ಯಾಕೆ “ಕಿಶೋರಿಯರು” ಅನ್ನೋ ಪದ ಬಳಸುತ್ತೆ?

ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ವಿವಿಧ ಯೋಜನೆಗಳಲ್ಲಿ “ಕಿಶೋರಿಯರು” ಎಂಬ ಪದವನ್ನೇ ಬಳಸುತ್ತಾರೆ.

ಯಾಕಂದ್ರೆ ಈ ವಯಸ್ಸಿನಲ್ಲಿ:

  • ದೇಹದ ಬೆಳವಣಿಗೆ ವೇಗವಾಗಿ ಆಗುತ್ತದೆ.
  • ರಕ್ತಹೀನತೆ (ಅನಿಮಿಯಾ) ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಪೌಷ್ಟಿಕ ಆಹಾರದ ಅವಶ್ಯಕತೆ ಜಾಸ್ತಿ ಇರುತ್ತದೆ.
  • ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಸರಿಯಾದ ಅರಿವು ಬೇಕಾಗುತ್ತದೆ.
  • ಮುಂದಿನ ದಿನಗಳಲ್ಲಿ ಆರೋಗ್ಯವಂತ ತಾಯಿಯಾಗಲು ಈ ವಯಸ್ಸಿನ ಪೌಷ್ಟಿಕತೆ ತುಂಬಾ ಮುಖ್ಯವಾಗುತ್ತದೆ.

ಕಿಶೋರಿಯರ ವಯಸ್ಸು ಎಷ್ಟು?

ಇದನ್ನ ನಮ್ಮ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತ ಸರ್ಕಾರನವೆ ಇದನ್ನ ಹೇಳಿರೊದು ಇವರ ಪ್ರಕಾರ, 10 ರಿಂದ 19 ವರ್ಷದೊಳಗಿನ ಹುಡುಗಿಯರನ್ನು ಕಿಶೋರಿಯರು (Adolescent Girls) ಎಂದು ಹೇಳಲಾಗುತ್ತದೆ.

ಸರಳ ಉದಾಹರಣೆ

  • 9 ವರ್ಷದ ಹುಡುಗಿಯರು– ಕಿಶೋರಿ ಅಲ್ಲ.
  • 10 ವರ್ಷದ ಹುಡುಗಿಯರು – ಕಿಶೋರಿ ವರ್ಗಕ್ಕೆ ಸೇರುತ್ತಾರೆ.
  • 15 ವರ್ಷದ ಹುಡುಗಿಯರು – ಕಿಶೋರಿ ವರ್ಗಕ್ಕೆ ಸೇರುತ್ತಾರೆ.
  • 18 ವರ್ಷದ ಹುಡುಗಿಯರು– ಕಿಶೋರಿ ವರ್ಗಕ್ಕೆ ಸೇರುತ್ತಾರೆ.
  • 19 ವರ್ಷದವರೆಗೆಯರು – ಕಿಶೋರಿ ವರ್ಗಕ್ಕೆ ಸೇರುತ್ತಾರೆ.
  • 20 ವರ್ಷ ಆದ ಮೇಲೆ –ಇವರು  ಕಿಶೋರಿ ಎನ್ನುವ ವರ್ಗಕ್ಕೆ ಸೇರುವುದಿಲ್ಲ.

ಶೋರಾಪೂರ ಭಾಷೆಯಲ್ಲಿ ಹೇಳಬೇಕಂದ್ರೆ…

“ಮಗುವಾಗಿರೋ ವಯಸ್ಸು ಮುಗ್ದು, ದೊಡ್ಡವರಾಗೋ ವಯಸ್ಸಿಗೆ ಕಾಲಿಡೋ 10ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳನ್ನ ಕಿಶೋರಿಯರು ಅಂತ ಕರೀತಾರೆ. ಈ ಹೆಸ್ರು ಸಂಸ್ಕೃತದ ‘ಕಿಶೋರ’ ಅನ್ನೋ ಪದದಿಂದ ಬಂದಿದೆ. ಅದ್ದರಿಂದ ಸರ್ಕಾರದ ಎಲ್ಲ ದಾಖಲೆಗಳಲ್ಲೂ, ಅಂಗನವಾಡಿ, ಆರೋಗ್ಯ ಇಲಾಖೆ, ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲೂ ಇದೇ ಪದ ಬಳಸ್ತಾರೆ.”

ಅಂಗನವಾಡಿ ಸಹಾಯಕಿ ಯಾರು? ಅವರ ಕೆಲಸ ಏನು?

ನಮ್ಮ ಕಡೆ ತುಂಬಾ ಜನ “ಅಂಗನವಾಡಿ ಸಹಾಯಕಿ ಅಂದ್ರೆ ಬರೀ ಊಟ ಮಾಡೋರು ಅಲ್ವಾ?” ಅಂತ ಅಂದ್ಕೊಳ್ತಾರೆ. ಆದ್ರೆ ಅದು ತಪ್ಪು. ಅಂಗನವಾಡಿ ಸಹಾಯಕಿಯರ ಕೆಲಸ ಬರೀ ಅಡುಗೆ ಮಾಡೋದು ಅಥವಾ ಮಕ್ಕಳಿಗೆ ಊಟ ಹಾಕೋದು ಅಷ್ಟೇ ಅಲ್ಲ. ಅಂಗನವಾಡಿ ಕೇಂದ್ರ ಸರಿಯಾಗಿ ನಡೆಯೋಕೆ ಕಾರ್ಯಕರ್ತೆಯ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋ ಪ್ರಮುಖ ಸಿಬ್ಬಂದಿಯೇ ಅಂಗನವಾಡಿ ಸಹಾಯಕಿ.

ಸರ್ಕಾರ ನಡೆಸುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯಶಸ್ವಿಯಾಗಿ ನಡೆಯಬೇಕಂದ್ರೆ ಅಂಗನವಾಡಿ ಸಹಾಯಕಿಯರ ಪಾತ್ರ ತುಂಬಾ ದೊಡ್ಡದು. ಮಕ್ಕಳ ಆರೈಕೆ, ಸ್ವಚ್ಛತೆ, ಪೌಷ್ಟಿಕ ಆಹಾರ, ಕೇಂದ್ರದ ನಿರ್ವಹಣೆ, ಗರ್ಭಿಣಿಯರಿಗೆ ಸಹಾಯ, ಬಾಣಂತಿಯರ ಸೇವೆ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಹಕಾರ – ಹೀಗೆ ಹಲವಾರು ಕೆಲಸಗಳನ್ನು ಅವರು ಮಾಡ್ತಾರೆ.


ಅಂಗನವಾಡಿ ಸಹಾಯಕಿ ಯಾರು?

ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯ ಜೊತೆಗೆ ಕೆಲಸ ಮಾಡುವ ಮಹಿಳೆಯೇ ಅಂಗನವಾಡಿ ಸಹಾಯಕಿ. ಕೇಂದ್ರದ ದೈನಂದಿನ ಕೆಲಸಗಳು ಸರಿಯಾಗಿ ನಡೆಯೋಕೆ ಸಹಾಯಕಿಯ ಪಾತ್ರ ಬಹಳ ಮುಖ್ಯ.

ಸರ್ಕಾರದ ಯೋಜನೆಗಳು ಜನರಿಗೆ ತಲುಪೋದು ಕಾರ್ಯಕರ್ತೆಯ ಒಬ್ಬಳಿಂದ ಮಾತ್ರ ಸಾಧ್ಯ ಆಗೋದಿಲ್ಲ. ಅದಕ್ಕೆ ಸಹಾಯಕಿಯ ಸಹಕಾರ ಅಗತ್ಯ.


ಅಂಗನವಾಡಿ ಸಹಾಯಕಿಯ ದಿನ ಯಾವಾಗ ಶುರು ಆಗುತ್ತೆ?

ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಮೊದಲು ಬಂದು ಕೇಂದ್ರವನ್ನು ಸ್ವಚ್ಛ ಮಾಡುತ್ತಾರೆ.

  • ನೆಲ ಗುಡಿಸುವುದು.
  • ಕೊಠಡಿ ಸ್ವಚ್ಛ ಮಾಡುವುದು.
  • ಮಕ್ಕಳಿಗೆ ಕುಳಿತುಕೊಳ್ಳುವ ಜಾಗ ಸಿದ್ಧ ಮಾಡುವುದು.
  • ಕುಡಿಯುವ ನೀರು ತುಂಬುವುದು.
  • ಅಡುಗೆ ಪಾತ್ರೆಗಳನ್ನು ತೊಳೆಯುವುದು.
  • ಗ್ಯಾಸ್, ಸ್ಟೌವ್ ಹಾಗೂ ಅಡುಗೆ ಸಾಮಗ್ರಿ ಸಿದ್ಧ ಮಾಡುವುದು.

ಇದಾದ ಮೇಲೆ ಮಕ್ಕಳು ಕೇಂದ್ರಕ್ಕೆ ಬರೋದು ಶುರು ಆಗುತ್ತೆ.


ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು

ಚಿಕ್ಕ ಮಕ್ಕಳು ಮೊದಲ ಸಲ ಮನೆ ಬಿಟ್ಟು ಅಂಗನವಾಡಿಗೆ ಬರ್ತಾರೆ. ಕೆಲವರು ಅಳ್ತಾರೆ, ಕೆಲವರಿಗೆ ಭಯ ಇರುತ್ತೆ.

ಆಗ ಸಹಾಯಕಿಯೇ:

  • ಮಕ್ಕಳನ್ನು ಸಮಾಧಾನ ಮಾಡ್ತಾರೆ.
  • ಆಟ ಆಡಿಸ್ತಾರೆ.
  • ಕೈ ತೊಳೆಸುತ್ತಾರೆ.
  • ಪ್ರೀತಿಯಿಂದ ಮಾತನಾಡುತ್ತಾರೆ.
  • ಊಟ ಮಾಡಿಸುತ್ತಾರೆ.
  • ಮಲಗಬೇಕಾದ್ರೆ ಮಲಗಿಸುತ್ತಾರೆ.

ಹೀಗಾಗಿ ಮಕ್ಕಳು ಅಂಗನವಾಡಿಗೆ ಬರೋದಕ್ಕೆ ಆಸಕ್ತಿ ತೋರ್ತಾರೆ.


ಪೌಷ್ಟಿಕ ಆಹಾರ ತಯಾರಿಸುವುದು

ಅಂಗನವಾಡಿ ಸಹಾಯಕಿಯ ಪ್ರಮುಖ ಕೆಲಸಗಳಲ್ಲಿ ಇದೂ ಒಂದು.

ಸರ್ಕಾರದಿಂದ ಬರುವ ಅಕ್ಕಿ, ಬೇಳೆ, ಎಣ್ಣೆ, ಮೊಟ್ಟೆ, ರಾಗಿ, ಸಕ್ಕರೆ, ಬೆಲ್ಲ ಸೇರಿದಂತೆ ಇತರೆ ಆಹಾರ ಸಾಮಗ್ರಿಗಳನ್ನು ಸರಿಯಾಗಿ ಬಳಸಿಕೊಂಡು ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸಿದ್ಧಪಡಿಸುತ್ತಾರೆ.

ಅಡುಗೆ ಮಾಡುವಾಗ:

  • ಸ್ವಚ್ಛತೆ ಕಾಪಾಡಬೇಕು.
  • ಆಹಾರ ಚೆನ್ನಾಗಿ ಬೇಯಬೇಕು.
  • ಪ್ರಮಾಣ ಸರಿಯಾಗಿರಬೇಕು.
  • ಸಮಯಕ್ಕೆ ಸಿದ್ಧವಾಗಿರಬೇಕು.

ಮಕ್ಕಳಿಗೆ ಊಟ ಮಾಡಿಸುವುದು

ಅಡುಗೆ ಮಾಡಿ ಮುಗಿದ ಮೇಲೆ:

  • ಮಕ್ಕಳ ಕೈ ತೊಳೆಸುವುದು.
  • ಸರಿಯಾಗಿ ಕುಳ್ಳಿರಿಸುವುದು.
  • ಊಟ ಬಡಿಸುವುದು.
  • ಚಿಕ್ಕ ಮಕ್ಕಳಿಗೆ ಊಟ ತಿನ್ನಲು ಸಹಾಯ ಮಾಡುವುದು.
  • ಊಟ ವ್ಯರ್ಥ ಮಾಡದಂತೆ ನೋಡಿಕೊಳ್ಳುವುದು.

ಇದು ಪ್ರತಿದಿನದ ಪ್ರಮುಖ ಕೆಲಸ.


ಅಂಗನವಾಡಿ ಕೇಂದ್ರ ಸ್ವಚ್ಛತೆ

ಮಕ್ಕಳ ಆರೋಗ್ಯಕ್ಕಾಗಿ ಕೇಂದ್ರ ಯಾವಾಗಲೂ ಸ್ವಚ್ಛವಾಗಿರಬೇಕು.

ಸಹಾಯಕಿಯರು:

  • ನೆಲ ಶುಚಿಗೊಳಿಸುತ್ತಾರೆ.
  • ಶೌಚಾಲಯ ಸ್ವಚ್ಛ ಇಡುತ್ತಾರೆ.
  • ಕುಡಿಯುವ ನೀರು ಪರಿಶೀಲಿಸುತ್ತಾರೆ.
  • ಕಸದ ವಿಲೇವಾರಿ ಮಾಡುತ್ತಾರೆ.
  • ಪಾತ್ರೆಗಳನ್ನು ತೊಳೆಯುತ್ತಾರೆ.
  • ಅಡುಗೆ ಕೊಠಡಿ ಸ್ವಚ್ಛ ಇಡುತ್ತಾರೆ.

ಕಾರ್ಯಕರ್ತೆಯರಿಗೆ ಸಹಾಯ

ಅಂಗನವಾಡಿ ಕಾರ್ಯಕರ್ತೆಯರು ದಾಖಲೆ ಕೆಲಸ, ಮೊಬೈಲ್ App, ಮಕ್ಕಳ ಮಾಹಿತಿ, ಗರ್ಭಿಣಿಯರ ಮಾಹಿತಿ, ವರದಿ ಕಳುಹಿಸುವ ಕೆಲಸ ಮಾಡ್ತಾರೆ.

ಆ ಸಮಯದಲ್ಲಿ ಸಹಾಯಕಿಯರು:

  • ಮಕ್ಕಳನ್ನು ನೋಡಿಕೊಳ್ಳುತ್ತಾರೆ.
  • ಊಟ ವ್ಯವಸ್ಥೆ ನೋಡಿಕೊಳ್ಳುತ್ತಾರೆ.
  • ಕೇಂದ್ರ ಸ್ವಚ್ಛತೆ ಮಾಡುತ್ತಾರೆ.
  • ಮನೆ ಭೇಟಿ ಹೋಗುವಾಗ ಕೆಲವೊಮ್ಮೆ ಜೊತೆ ಹೋಗುತ್ತಾರೆ.
  • ಆರೋಗ್ಯ ಕಾರ್ಯಕ್ರಮಗಳಲ್ಲಿ ಸಹಾಯ ಮಾಡುತ್ತಾರೆ.

ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಪಾತ್ರ

ಗ್ರಾಮದಲ್ಲಿ ಆರೋಗ್ಯ ಇಲಾಖೆ ಲಸಿಕೆ ಕಾರ್ಯಕ್ರಮ ನಡೆಸಿದಾಗ ಸಹಾಯಕಿಯರೂ ಭಾಗವಹಿಸುತ್ತಾರೆ.

ಅವರು:

  • ಮಕ್ಕಳನ್ನು ಕರೆಸುತ್ತಾರೆ.
  • ಗರ್ಭಿಣಿಯರಿಗೆ ಮಾಹಿತಿ ಕೊಡುತ್ತಾರೆ.
  • ಲಸಿಕೆ ದಿನ ವ್ಯವಸ್ಥೆ ಮಾಡುತ್ತಾರೆ.
  • ಜನರನ್ನು ಸಾಲಿನಲ್ಲಿ ನಿಲ್ಲಿಸುತ್ತಾರೆ.
  • ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡುತ್ತಾರೆ.

ಗರ್ಭಿಣಿಯರಿಗೆ ಸಹಾಯ

ಗರ್ಭಿಣಿ ಮಹಿಳೆ ಅಂಗನವಾಡಿಗೆ ಬಂದರೆ:

  • ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ.
  • ಪೌಷ್ಟಿಕ ಆಹಾರ ಕೊಡುತ್ತಾರೆ.
  • ಆರೋಗ್ಯ ಮಾಹಿತಿ ಕೇಳುತ್ತಾರೆ.
  • ಕಾರ್ಯಕರ್ತೆಯ ಜೊತೆ ಸೇರಿ ಸಲಹೆ ನೀಡುತ್ತಾರೆ.

ಬಾಣಂತಿಯರ ಆರೈಕೆ

ಹೆರಿಗೆಯಾದ ನಂತರ ಬಾಣಂತಿಯರು ಬಂದರೆ:

  • ಮಗುವಿನ ಆರೋಗ್ಯ ವಿಚಾರಿಸುತ್ತಾರೆ.
  • ಪೌಷ್ಟಿಕ ಆಹಾರ ಕೊಡುತ್ತಾರೆ.
  • ಮಗುವಿಗೆ ತಾಯಿಹಾಲಿನ ಮಹತ್ವ ತಿಳಿಸುತ್ತಾರೆ.
  • ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಲು ಹೇಳುತ್ತಾರೆ.

ಮಕ್ಕಳ ಸುರಕ್ಷತೆ

ಅಂಗನವಾಡಿ ಸಹಾಯಕಿಯರು ಯಾವಾಗಲೂ ಮಕ್ಕಳ ಸುರಕ್ಷತೆ ಕಡೆ ಗಮನ ಕೊಡಬೇಕು.

  • ಮಕ್ಕಳು ಬೀಳದಂತೆ ನೋಡಿಕೊಳ್ಳುವುದು.
  • ಬಿಸಿ ಪಾತ್ರೆಗಳ ಹತ್ತಿರ ಹೋಗದಂತೆ ತಡೆಯುವುದು.
  • ಆಟಿಕೆಗಳನ್ನು ಸುರಕ್ಷಿತವಾಗಿ ಬಳಸಿಸುವುದು.
  • ಹೊರಗೆ ಒಬ್ಬರೇ ಹೋಗದಂತೆ ನೋಡಿಕೊಳ್ಳುವುದು.

ಅಂಗನವಾಡಿ ಸಹಾಯಕಿಯರಲ್ಲಿ ಇರಬೇಕಾದ ಗುಣಗಳು

  • ಮಕ್ಕಳ ಮೇಲೆ ಪ್ರೀತಿ.
  • ಸಹನೆ.
  • ಸ್ವಚ್ಛತೆ.
  • ಸಮಯ ಪಾಲನೆ.
  • ಜವಾಬ್ದಾರಿ.
  • ಜನರ ಜೊತೆ ಒಳ್ಳೆಯ ಮಾತು.
  • ಸೇವಾ ಮನೋಭಾವ.
  • ಕಾರ್ಯಕರ್ತೆಯ ಜೊತೆ ಹೊಂದಾಣಿಕೆ.

ಸಮಾಜದಲ್ಲಿ ಸಹಾಯಕಿಯ ಪಾತ್ರ

ನಮ್ಮೂರಲ್ಲಿ ಹಲವರು ಸಹಾಯಕಿಯ ಕೆಲಸ ಚಿಕ್ಕದು ಅಂತ ಅಂದ್ಕೊಳ್ತಾರೆ. ಆದರೆ ಅದು ತಪ್ಪು.

ಕಾರ್ಯಕರ್ತೆ ಮೆದುಳಾದ್ರೆ, ಸಹಾಯಕಿ ಆ ಕೇಂದ್ರದ ಬಲವಾದ ಕೈ. ಇಬ್ಬರೂ ಸೇರಿ ಕೆಲಸ ಮಾಡಿದಾಗ ಮಾತ್ರ ಅಂಗನವಾಡಿ ಕೇಂದ್ರ ಸರಿಯಾಗಿ ನಡೆಯುತ್ತದೆ.

ಮಕ್ಕಳು ನಗುತ್ತಾ ಆಡೋದಕ್ಕೂ, ಸಮಯಕ್ಕೆ ಊಟ ಮಾಡೋದಕ್ಕೂ, ಕೇಂದ್ರ ಸ್ವಚ್ಛವಾಗಿರೋದಕ್ಕೂ, ಗರ್ಭಿಣಿಯರಿಗೆ ಸರಿಯಾದ ಸೇವೆ ಸಿಗೋದಕ್ಕೂ ಸಹಾಯಕಿಯರ ಪಾತ್ರ ತುಂಬಾ ದೊಡ್ಡದು.

ಇವತ್ತಿನ ದಿನದಲ್ಲಿ ಅಂಗನವಾಡಿ ಸಹಾಯಕಿಯ ಕೆಲಸ ಬರೀ ಅಡುಗೆ ಮಾಡೋದು ಅಥವಾ ಮಕ್ಕಳನ್ನು ನೋಡಿಕೊಳ್ಳೋದು ಅಷ್ಟೇ ಅಲ್ಲ. ಈಗ ಸರ್ಕಾರ ಅಂಗನವಾಡಿ ಕೇಂದ್ರಗಳ ಕೆಲಸವನ್ನು ಡಿಜಿಟಲ್ ಮಾಡಿದೆ. ಅದಕ್ಕಾಗಿಯೇ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಸ್ಮಾರ್ಟ್ ಮೊಬೈಲ್ ಕೊಡಲಾಗಿದೆ. ಆ ಮೊಬೈಲ್‌ನಲ್ಲಿರುವ Poshan Tracker App ಮೂಲಕ ದಿನನಿತ್ಯದ ಕೆಲಸದ ಮಾಹಿತಿಯನ್ನು ಎಂಟ್ರಿ ಮಾಡಲಾಗುತ್ತದೆ.

ಸಹಾಯಕಿಯರು ಹೆಚ್ಚಾಗಿ ಕಾರ್ಯಕರ್ತೆಯ ಜೊತೆ ಸೇರಿ ಈ ಕೆಲಸಗಳನ್ನು ಮಾಡ್ತಾರೆ. ಕೆಲವೊಮ್ಮೆ ಕಾರ್ಯಕರ್ತೆಯರಿಗೆ ಮೊಬೈಲ್‌ನಲ್ಲಿ ಮಾಹಿತಿ ದಾಖಲಿಸಲು ಸಹಾಯ ಕೂಡ ಮಾಡ್ತಾರೆ.


ಬೆಳಿಗ್ಗೆಯಿಂದ ಸಂಜೆವರೆಗೆ ಸಹಾಯಕಿಯ ದಿನ ಹೇಗಿರುತ್ತೆ?

ಅಂಗನವಾಡಿ ಕೇಂದ್ರದ ಸಮಯ ಎಷ್ಟು?

ಅಂಗನವಾಡಿ ಕೇಂದ್ರದ ಸಮಯವನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಗದಿಪಡಿಸುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೌಷ್ಟಿಕ ಆಹಾರ ವಿತರಣೆ ಹಾಗೂ ಇತರೆ ಚಟುವಟಿಕೆಗಳು ನಡೆಯುತ್ತವೆ.

ಆದರೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕೆಲಸ ಅಷ್ಟಕ್ಕೇ ಮುಗಿಯೋದಿಲ್ಲ.

ಮಧ್ಯಾಹ್ನದ ನಂತರ ಅವರು:

  • ಮನೆ ಮನೆ ಭೇಟಿ ಮಾಡುವುದು.
  • ಗರ್ಭಿಣಿಯರು ಮತ್ತು ಬಾಣಂತಿಯರನ್ನು ಭೇಟಿ ಮಾಡುವುದು.
  • ಮಕ್ಕಳ ಆರೋಗ್ಯ ಮಾಹಿತಿ ಸಂಗ್ರಹಿಸುವುದು.
  • Poshan Tracker Appನಲ್ಲಿ ಮಾಹಿತಿಯನ್ನು ದಾಖಲಿಸುವುದು.
  • ಸರ್ಕಾರ ಕೇಳುವ ವರದಿಗಳನ್ನು ಕಳುಹಿಸುವುದು.
  • ಆರೋಗ್ಯ ಇಲಾಖೆ ಸಭೆ ಅಥವಾ ತರಬೇತಿಗಳಲ್ಲಿ ಭಾಗವಹಿಸುವುದು.

ಈ ಕೆಲಸಗಳನ್ನು ಕೂಡ ಮಾಡಬೇಕಾಗುತ್ತದೆ.

ನಮ್ಮ ಕಡೆ ಹೇಳ್ಬೇಕಂದ್ರೆ, ಅಂಗನವಾಡಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಕ್ಕಳಿಗೆ ತೆರೆದಿರುತ್ತೆ. ಆದ್ರೆ ಕಾರ್ಯಕರ್ತೆ ಮತ್ತು ಸಹಾಯಕಿಯರ ಕೆಲಸ ಅಲ್ಲಿಗೇ ಮುಗಿಯೋಲ್ಲ. ಸರ್ಕಾರದ ಕೆಲಸ, ಮನೆ ಭೇಟಿ, ಮೊಬೈಲ್‌ನಲ್ಲಿ ಮಾಹಿತಿ ಎಂಟ್ರಿ, ಸಭೆಗಳು ಇತ್ಯಾದಿ ಸೇರಿ ದಿನದ ಉಳಿದ ಸಮಯದಲ್ಲೂ ಕೆಲಸ ಮಾಡಬೇಕಾಗುತ್ತೆ.

ಬೆಳಿಗ್ಗೆ ಅಂಗನವಾಡಿ ಕೇಂದ್ರಕ್ಕೆ ಬಂದ ತಕ್ಷಣ ಮೊದಲು ಸ್ವಚ್ಛತೆ ಮಾಡುತ್ತಾರೆ.

  • ನೆಲ ಗುಡಿಸುವುದು.
  • ಕುಡಿಯುವ ನೀರು ತುಂಬುವುದು.
  • ಮಕ್ಕಳಿಗೆ ಕುಳಿತುಕೊಳ್ಳುವ ಜಾಗ ಸಿದ್ಧ ಮಾಡುವುದು.
  • ಆಟಿಕೆಗಳನ್ನು ಜೋಡಿಸುವುದು.
  • ಅಡುಗೆಗೆ ಬೇಕಾದ ಸಾಮಾನು ಸಿದ್ಧ ಮಾಡುವುದು.

ಮಕ್ಕಳು ಬಂದ ಮೇಲೆ ಅವರ ಕೈ, ಕಾಲು ತೊಳೆಸಿ ಸ್ವಚ್ಛವಾಗಿ ಒಳಗೆ ಕರೆದುಕೊಂಡು ಹೋಗುತ್ತಾರೆ.


ಮಕ್ಕಳಿಗೆ ಪಾಠ ಹೇಳುವಾಗ ಸಹಾಯ

ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ:

  • ಅಕ್ಷರ ಕಲಿಸುತ್ತಾರೆ.
  • ಹಾಡು ಹೇಳಿಸುತ್ತಾರೆ.
  • ಕಥೆ ಹೇಳುತ್ತಾರೆ.
  • ಆಟ ಆಡಿಸುತ್ತಾರೆ. ದಿನನಿತ್ಯದಲ್ಲಿ ಪ್ರತಿಯೋಂದು ವಿಡಿಯೋ ಮಾಡಿ ಮೇಲಾಧಿಕಾರಿಗಳಿಗೆ ಕಳಿಸಬೇಕು ಇದು ಕಾರ್ಯಕರ್ತೆಯರ ಕೆಲಸ.

ಈ ಸಮಯದಲ್ಲಿ ಸಹಾಯಕಿಯರು ಮಕ್ಕಳನ್ನು ಸರಿಯಾಗಿ ಕುಳ್ಳಿರಿಸಿ, ಪುಸ್ತಕ ಅಥವಾ ಆಟಿಕೆಗಳನ್ನು ಹಂಚಿ, ಎಲ್ಲ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ.


ಪೌಷ್ಟಿಕ ಆಹಾರ ತಯಾರಿಸುವುದು

ಸರ್ಕಾರದಿಂದ ಬಂದಿರುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಪೌಷ್ಟಿಕ ಆಹಾರ ತಯಾರಿಸಬೇಕು.

ಅಡುಗೆ ಮಾಡುವಾಗ:

  • ಪಾತ್ರೆಗಳು ಸ್ವಚ್ಛ ಇರಬೇಕು.
  • ನೀರು ಶುದ್ಧವಾಗಿರಬೇಕು.
  • ಆಹಾರ ಸಮಯಕ್ಕೆ ಸಿದ್ಧವಾಗಬೇಕು.
  • ಮಕ್ಕಳಿಗೆ ಬಿಸಿ ಬಿಸಿಯಾಗಿ ಬಡಿಸಬೇಕು.

ಆಹಾರ ಉಳಿದರೆ ಅದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು.


ಮಕ್ಕಳಿಗೆ ಊಟ ಮಾಡಿಸುವುದು

ಎಲ್ಲ ಮಕ್ಕಳಿಗೂ ಸಮಾನವಾಗಿ ಆಹಾರ ಸಿಗುವಂತೆ ನೋಡಿಕೊಳ್ಳಬೇಕು.

ಚಿಕ್ಕ ಮಕ್ಕಳಿಗೆ:

  • ಊಟ ತಿನ್ನಲು ಸಹಾಯ ಮಾಡುವುದು.
  • ನೀರು ಕುಡಿಸುವುದು.
  • ಕೈ ತೊಳೆಸುವುದು.
  • ಊಟದ ನಂತರ ಸ್ವಚ್ಛತೆ ಮಾಡಿಸುವುದು.

ಮನೆ ಮನೆ ಭೇಟಿ

ಕಾರ್ಯಕರ್ತೆಯ ಜೊತೆಗೆ ಕೆಲವೊಮ್ಮೆ ಸಹಾಯಕಿಯರೂ ಮನೆ ಮನೆಗೆ ಹೋಗುತ್ತಾರೆ.

ಆ ಸಮಯದಲ್ಲಿ:

  • ಹೊಸ ಮಗು ಹುಟ್ಟಿದೆಯಾ?
  • ಗರ್ಭಿಣಿ ಇದ್ದಾರಾ?
  • ಮಗು ಅಂಗನವಾಡಿಗೆ ಬರ್ತಿದೆಯಾ?
  • ಪೌಷ್ಟಿಕ ಆಹಾರ ಪಡೆಯುತ್ತಿದ್ದಾರಾ?

ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ.


Poshan Tracker App ಬಗ್ಗೆ

ಇವತ್ತು ಅಂಗನವಾಡಿ ಕೇಂದ್ರದ ಬಹುತೇಕ ಮಾಹಿತಿಯನ್ನು Poshan Tracker Appನಲ್ಲಿ ದಾಖಲಿಸಲಾಗುತ್ತದೆ.

ಈ Appನಲ್ಲಿ:

  • ಮಕ್ಕಳ ಹೆಸರು
  • ಜನ್ಮ ದಿನಾಂಕ
  • ತೂಕ
  • ಎತ್ತರ
  • ಗರ್ಭಿಣಿಯರ ಮಾಹಿತಿ
  • ಬಾಣಂತಿಯರ ಮಾಹಿತಿ
  • ಪೌಷ್ಟಿಕ ಆಹಾರ ವಿತರಣೆ
  • ಮನೆ ಭೇಟಿ
  • ಲಸಿಕೆ ಮಾಹಿತಿ

ಎಲ್ಲವೂ ದಾಖಲಾಗುತ್ತದೆ.

ಕಾರ್ಯಕರ್ತೆಯರು ಈ ಮಾಹಿತಿಯನ್ನು ಮೊಬೈಲ್‌ನಲ್ಲಿ ಎಂಟ್ರಿ ಮಾಡುತ್ತಾರೆ. ಸಹಾಯಕಿಯರು ಮಾಹಿತಿ ಸಂಗ್ರಹಿಸಲು ಹಾಗೂ ಕಾರ್ಯಕರ್ತೆಯರಿಗೆ ಸಹಾಯ ಮಾಡುತ್ತಾರೆ.


ಸರ್ಕಾರದಿಂದ ಮೊಬೈಲ್

ಸರ್ಕಾರ ಹಲವೆಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕೃತ ಸ್ಮಾರ್ಟ್ ಮೊಬೈಲ್ ನೀಡಿದೆ.

ಆ ಮೊಬೈಲ್‌ನಲ್ಲಿ:

  • Poshan Tracker App
  • ಸರ್ಕಾರಿ ಸೂಚನೆಗಳು
  • ವರದಿ ಕಳುಹಿಸುವ ವ್ಯವಸ್ಥೆ

ಇರುತ್ತದೆ.

ಅಧಿಕಾರಿಗಳು ಇದೇ App ಮೂಲಕ ಕೇಂದ್ರದ ಕೆಲಸ ಪರಿಶೀಲಿಸುತ್ತಾರೆ.


ದಾಖಲೆ ಕೆಲಸ

ಡಿಜಿಟಲ್ ವ್ಯವಸ್ಥೆ ಬಂದರೂ ಕೆಲವು ದಾಖಲೆಗಳನ್ನು ಇನ್ನೂ ನಿರ್ವಹಿಸಬೇಕಾಗುತ್ತದೆ.

ಉದಾಹರಣೆಗೆ:

  • ಹಾಜರಾತಿ
  • ಆಹಾರ ಸ್ಟಾಕ್
  • ಅಡುಗೆ ಸಾಮಗ್ರಿ
  • ಮಕ್ಕಳ ಮಾಹಿತಿ
  • ಗರ್ಭಿಣಿಯರ ಪಟ್ಟಿ

ಇವುಗಳನ್ನು ಕಾರ್ಯಕರ್ತೆಯ ಜೊತೆ ಸೇರಿ ನೋಡಿಕೊಳ್ಳುತ್ತಾರೆ.


ಆರೋಗ್ಯ ಇಲಾಖೆಯ ಜೊತೆ ಕೆಲಸ

ತಿಂಗಳಲ್ಲಿ ಆರೋಗ್ಯ ಇಲಾಖೆ ಬಂದಾಗ:

  • ಲಸಿಕೆ ಕಾರ್ಯಕ್ರಮ
  • ತೂಕ ಪರೀಕ್ಷೆ
  • ಆರೋಗ್ಯ ತಪಾಸಣೆ

ಇವುಗಳಿಗೆ ಸಹಾಯಕಿಯರು ಸಂಪೂರ್ಣ ಸಹಕಾರ ಕೊಡುತ್ತಾರೆ.


ಸ್ವಚ್ಛತೆ ಬಹಳ ಮುಖ್ಯ

ಅಂಗನವಾಡಿಯಲ್ಲಿ ಸ್ವಚ್ಛತೆ ಇಲ್ಲ ಅಂದ್ರೆ ಮಕ್ಕಳಿಗೆ ಕಾಯಿಲೆ ಬರಬಹುದು.

ಆದ್ದರಿಂದ ಪ್ರತಿದಿನ:

  • ನೆಲ ಶುಚಿಗೊಳಿಸುವುದು.
  • ಪಾತ್ರೆ ತೊಳೆಯುವುದು.
  • ಶೌಚಾಲಯ ಸ್ವಚ್ಛ ಮಾಡುವುದು.
  • ಕುಡಿಯುವ ನೀರು ಪರಿಶೀಲಿಸುವುದು.

ಈ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡುತ್ತಾರೆ.


ಮಕ್ಕಳ ಸುರಕ್ಷತೆ

ಅಂಗನವಾಡಿಯಲ್ಲಿ ಯಾವುದೇ ಮಗು:

  • ಬಿದ್ದು ಗಾಯ ಆಗಬಾರದು.
  • ಬಿಸಿ ಪಾತ್ರೆ ಮುಟ್ಟಬಾರದು.
  • ಹೊರಗೆ ಒಬ್ಬರೇ ಹೋಗಬಾರದು.

ಇದನ್ನೆಲ್ಲಾ ಸಹಾಯಕಿಯರು ಗಮನಿಸುತ್ತಾರೆ.


ಕಾರ್ಯಕರ್ತೆ ಮತ್ತು ಸಹಾಯಕಿ ಇಬ್ಬರೂ ಒಂದೇ ತಂಡ

ನಮ್ಮೂರಲ್ಲಿ ಕೆಲವರು ಕಾರ್ಯಕರ್ತೆಯ ಕೆಲಸ ದೊಡ್ಡದು, ಸಹಾಯಕಿಯ ಕೆಲಸ ಚಿಕ್ಕದು ಅಂತ ಅಂದ್ಕೊಳ್ತಾರೆ.

ಆದ್ರೆ ಅದು ಸರಿಯಲ್ಲ.

ಕಾರ್ಯಕರ್ತೆ ಮತ್ತು ಸಹಾಯಕಿ ಇಬ್ಬರೂ ಸೇರಿ ಕೆಲಸ ಮಾಡಿದಾಗ ಮಾತ್ರ ಅಂಗನವಾಡಿ ಕೇಂದ್ರ ಸರಿಯಾಗಿ ನಡೆಯುತ್ತೆ.

ಒಬ್ಬರು ದಾಖಲೆ, ಶಿಕ್ಷಣ, ಸರ್ಕಾರಿ ಕೆಲಸ ನೋಡಿಕೊಂಡರೆ, ಇನ್ನೊಬ್ಬರು ಮಕ್ಕಳ ಆರೈಕೆ, ಆಹಾರ, ಸ್ವಚ್ಛತೆ, ಸುರಕ್ಷತೆ ನೋಡಿಕೊಳ್ಳುತ್ತಾರೆ.


ಸಹಾಯಕಿಯರ ಕೆಲಸಕ್ಕೆ ಬೇಕಾಗಿರುವ ಗುಣಗಳು

  • ಮಕ್ಕಳ ಮೇಲೆ ಪ್ರೀತಿ
  • ಅಂಗನವಾಡಿ ಕೇಂದ್ರದ ಸುತ್ತಾ ಮುತ್ತಾ ಸ್ವಚ್ಛತೆ ಇರಬೇಕು
  • ಸಮಯ ಪಾಲನೆ
  • ತಂಬಾ ಸಹನೆ ಇಂದ ಇರಬೆಕು ಯಾಕಂದ್ರ ಮಕ್ಕಳ ಬುದ್ದಿ ಅಂತ್ರು ಎಲ್ಲರಿಗೂ ಗೊತ್ತಿದ್ದೆ ಇದೆ ಅವು ಏನೇ ಮಾಅಡಿದ್ರು ಸಹಾಯಕಿ ಆದವರು ಅದನ್ನ ನಸಂಬಾಳಿಸಿಕೊಂಡು ಹೋಗಬೇಕು ಇದು ಅವರ ಕೆಲಸ ನಿಮ್ಮ ಮಕ್ಕಳನ್ನ ಹೆಂಗ ನೋಡ್ಕೊತಿರಿ ಅದರಂಗ ಅವು ಮಕ್ಕಳು ಕೂಡಾ ನಮ್ಮ ಮಕ್ಕಳು ಅಂತಾ ತಿಳಕೊಂಡು ಹೋದ್ರ ಸಾಕು.
  • ಜನರ ಜೊತೆ ಒಳ್ಳೆಯ ಮಾತು ಆಡಬೇಕು ಏನಾದ್ರು ಸರಕಾರದಿಂದ ಏನಾದ್ರು ಆಹಾರ ಕಿಟ್ ಅಂತಾ ಕೇಳ್ತಿರುತ್ತಾರ ಅದಕ್ಕೆ ಕಾರ್ಯಕರ್ತೆ ಆಗಲಿ ಸಹಾಯಕಿನೆ ಆಗಲಿ ಅವರಿಗೆ ಪೂರ್ತಿ ಮಾಹಿತಿ ಕೋಡಬೇಕು.
  • ಸೇವಾ ಮನೋಭಾವ
  • ಜವಾಬ್ದಾರಿ ಮುಖ್ಯ ಮಕ್ಕಳು ಬೆಳಗ್ಗೆ 10 ಘಂಟೆಗೆ ಬಂದ್ರೆ ಮತ್ತೆ ಸಾಯಾಂಕಾಲ

ಇವು ಇದ್ದರೆ ಒಳ್ಳೆಯ ಅಂಗನವಾಡಿ ಸಹಾಯಕಿಯಾಗಬಹುದು.

ಅಂಗನವಾಡಿ ಸಹಾಯಕಿಯರ ಕೆಲಸ – ವೇತನ, ಸವಾಲುಗಳು, ಜವಾಬ್ದಾರಿ ಮತ್ತು ಸಮಾಜದಲ್ಲಿ ಅವರ ಪಾತ್ರ

ಇಲ್ಲಿವರೆಗೂ ಅಂಗನವಾಡಿ ಸಹಾಯಕಿ ಯಾರು, ಏನೇನು ಕೆಲಸ ಮಾಡ್ತಾರೆ, ದಿನನಿತ್ಯದ ಜವಾಬ್ದಾರಿಗಳು ಏನು, ಮೊಬೈಲ್ ಮತ್ತು Poshan Tracker App ಮೂಲಕ ಹೇಗೆ ಕೆಲಸ ಮಾಡ್ತಾರೆ ಅನ್ನೋದನ್ನ ನೋಡಿದೀವಿ. ಈಗ ಅವರ ಸೇವೆ, ಸಮಾಜದಲ್ಲಿರುವ ಗೌರವ, ಕೆಲಸದಲ್ಲಿ ಎದುರಾಗುವ ಸವಾಲುಗಳು ಹಾಗೂ ಜನರಿಗೆ ಗೊತ್ತಿಲ್ಲದ ಇನ್ನಷ್ಟು ವಿಷಯಗಳ ಬಗ್ಗೆ ನೋಡೋಣ.


ಅಂಗನವಾಡಿ ಸಹಾಯಕಿಯ ಕೆಲಸ ಸುಲಭ ಅಲ್ಲ

ನಮ್ಮ ಊರಲ್ಲಿ ಕೆಲವರು “ಸಹಾಯಕಿ ಅಂದ್ರೆ ಬರೀ ಅಡುಗೆ ಮಾಡ್ತಾರೆ” ಅಂತ ಹೇಳ್ತಾರೆ. ಆದ್ರೆ ಅವರ ಜೊತೆ ಒಂದು ದಿನ ಕೆಲಸ ಮಾಡಿ ನೋಡಿದ್ರೆ ಎಷ್ಟು ಜವಾಬ್ದಾರಿ ಇದೆ ಅನ್ನೋದು ಗೊತ್ತಾಗುತ್ತೆ.

ಬೆಳಿಗ್ಗೆಯಿಂದ ಸಂಜೆವರೆಗೂ ಮಕ್ಕಳ ಆರೈಕೆ, ಅಡುಗೆ, ಸ್ವಚ್ಛತೆ, ಪಾತ್ರೆ ತೊಳೆಯೋದು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಡುವುದು, ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಕಾರ್ಯಕರ್ತೆಯರಿಗೆ ಸಹಾಯ ಮಾಡುವುದು – ಹೀಗೆ ದಿನ ಪೂರ್ತಿ ಕೆಲಸ ಇರುತ್ತೆ.


ಮಕ್ಕಳಿಗೆ ಎರಡನೇ ತಾಯಿಯಂತೆ

ಅಂಗನವಾಡಿಗೆ ಬರುವ ಮಕ್ಕಳಲ್ಲಿ ಹಲವರು ಎರಡು-ಮೂರು ವರ್ಷದ ಪುಟ್ಟ ಮಕ್ಕಳು.

ಅವರಿಗೆ:

  • ಊಟ ಮಾಡಿಸೋದು.
  • ನೀರು ಕುಡಿಸೋದು.
  • ಬಿದ್ದರೆ ಎತ್ತೋದು.
  • ಅಳಿದ್ರೆ ಸಮಾಧಾನ ಮಾಡೋದು.
  • ಮಲಗಿಸೋದು.
  • ಆಟ ಆಡಿಸೋದು.

ಈ ಎಲ್ಲ ಕೆಲಸಗಳನ್ನು ಸಹಾಯಕಿಯರು ಪ್ರೀತಿಯಿಂದ ಮಾಡ್ತಾರೆ.

ಅದಕ್ಕೆ ಹಲವರು “ಅಂಗನವಾಡಿ ಸಹಾಯಕಿ ಅಂದ್ರೆ ಮಕ್ಕಳಿಗೆ ಎರಡನೇ ತಾಯಿ” ಅಂತ ಹೇಳ್ತಾರೆ.


ಸಮಾಜದಲ್ಲಿ ಅವರ ಪಾತ್ರ

ಒಂದು ಊರು ಆರೋಗ್ಯವಾಗಿರಬೇಕಾದರೆ ಮಕ್ಕಳ ಆರೋಗ್ಯ ಚೆನ್ನಾಗಿರಬೇಕು.

ಮಕ್ಕಳು ಆರೋಗ್ಯವಾಗಿರಬೇಕಾದರೆ:

  • ಪೌಷ್ಟಿಕ ಆಹಾರ.
  • ಸ್ವಚ್ಛತೆ.
  • ಲಸಿಕೆ.
  • ಒಳ್ಳೆಯ ಆರೈಕೆ.

ಇವು ಎಲ್ಲವೂ ಬೇಕು.

ಈ ಕೆಲಸಗಳಲ್ಲಿ ಅಂಗನವಾಡಿ ಸಹಾಯಕಿಯರ ಪಾತ್ರ ತುಂಬಾ ದೊಡ್ಡದು.


ಆರೋಗ್ಯ ಇಲಾಖೆಗೆ ಸಹಕಾರ

ANM, ASHA, ವೈದ್ಯರು ಬಂದಾಗ ಸಹಾಯಕಿಯರು ಸಂಪೂರ್ಣ ಸಹಕಾರ ಕೊಡ್ತಾರೆ.

  • ಮಕ್ಕಳನ್ನು ಕರೆಸೋದು.
  • ಗರ್ಭಿಣಿಯರಿಗೆ ಮಾಹಿತಿ ಕೊಡುವುದು.
  • ಲಸಿಕೆ ದಿನ ಸಹಾಯ ಮಾಡುವುದು.
  • ದಾಖಲೆಗಳಿಗೆ ಬೇಕಾದ ಮಾಹಿತಿ ನೀಡುವುದು.

ಶಾಲೆಗೆ ಹೋಗುವ ಮುಂಚೆ ಮಕ್ಕಳ ಸಿದ್ಧತೆ

ಮಕ್ಕಳು ನೇರವಾಗಿ ಶಾಲೆಗೆ ಹೋದ್ರೆ ಕೆಲವರಿಗೆ ಭಯ ಇರುತ್ತೆ.

ಅಂಗನವಾಡಿಯಲ್ಲಿ:

  • ಆಟ ಆಡುತ್ತಾರೆ.
  • ಹಾಡು ಕಲಿಯುತ್ತಾರೆ.
  • ಸ್ನೇಹಿತರ ಜೊತೆ ಬೆರೆಯುತ್ತಾರೆ.
  • ಶಿಕ್ಷಕರ ಮಾತು ಕೇಳೋದು ಕಲಿಯುತ್ತಾರೆ.

ಇದರಿಂದ ಶಾಲೆಗೆ ಹೋದಾಗ ಅವರಿಗೆ ಕಷ್ಟ ಆಗೋದಿಲ್ಲ.


ಕೆಲಸದಲ್ಲಿ ಎದುರಾಗುವ ಸವಾಲುಗಳು

ಅಂಗನವಾಡಿ ಸಹಾಯಕಿಯರಿಗೆ ಕೆಲವೊಮ್ಮೆ ಹಲವು ಸಮಸ್ಯೆಗಳು ಎದುರಾಗುತ್ತವೆ.

  • ಬೇಸಿಗೆಯಲ್ಲಿ ಹೆಚ್ಚು ಬಿಸಿ.
  • ಮಳೆಗಾಲದಲ್ಲಿ ಕೇಂದ್ರಕ್ಕೆ ನೀರು ಬರುವುದು.
  • ಕೆಲವು ಕಡೆ ಕಟ್ಟಡ ಸಮಸ್ಯೆ.
  • ಆಹಾರ ಸಾಮಗ್ರಿ ತಡವಾಗಿ ಬರುವುದು.
  • ಹೆಚ್ಚು ಮಕ್ಕಳು ಇದ್ದರೆ ಕೆಲಸದ ಒತ್ತಡ ಹೆಚ್ಚಾಗುವುದು.
  • ಆರೋಗ್ಯ ಕಾರ್ಯಕ್ರಮಗಳಿಗಾಗಿ ಹೊರಗೆ ಹೋಗಬೇಕಾಗುವುದು.

ಆದರೂ ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ.


ಜನರು ಸಹಕರಿಸಿದರೆ ಕೆಲಸ ಇನ್ನೂ ಚೆನ್ನಾಗುತ್ತದೆ

ಪೋಷಕರು:

  • ಮಕ್ಕಳನ್ನು ಪ್ರತಿದಿನ ಅಂಗನವಾಡಿಗೆ ಕಳಿಸಬೇಕು.
  • ಸಮಯಕ್ಕೆ ಕರೆದುಕೊಂಡು ಬರಬೇಕು.
  • ಲಸಿಕೆ ತಪ್ಪಿಸಬಾರದು.
  • ಆರೋಗ್ಯ ಮಾಹಿತಿ ಮರೆಮಾಚಬಾರದು.

ಹೀಗೆ ಮಾಡಿದರೆ ಕಾರ್ಯಕರ್ತೆ ಮತ್ತು ಸಹಾಯಕಿಯರ ಕೆಲಸ ಸುಲಭವಾಗುತ್ತದೆ.


ಸಹಾಯಕಿಯರಿಗೆ ಇರಬೇಕಾದ ಕೌಶಲ್ಯಗಳು

ಒಳ್ಳೆಯ ಅಂಗನವಾಡಿ ಸಹಾಯಕಿಯಾಗಬೇಕಂದ್ರೆ:

  • ಮಕ್ಕಳ ಜೊತೆ ಬೆರೆಯುವ ಗುಣ ಇರಬೇಕು.
  • ಸ್ವಚ್ಛತೆ ಕಾಪಾಡಬೇಕು.
  • ಸಹನೆ ಇರಬೇಕು.
  • ಕಾರ್ಯಕರ್ತೆಯ ಜೊತೆ ಹೊಂದಾಣಿಕೆ ಇರಬೇಕು.
  • ಜನರ ಜೊತೆ ಗೌರವದಿಂದ ಮಾತನಾಡಬೇಕು.
  • ಸಮಯಕ್ಕೆ ಕೆಲಸ ಮುಗಿಸಬೇಕು.

ಸರ್ಕಾರದ ತರಬೇತಿ

ಸರ್ಕಾರ ಕಾಲಕಾಲಕ್ಕೆ ಅಂಗನವಾಡಿ ಸಿಬ್ಬಂದಿಗೆ ತರಬೇತಿ ಕೊಡುತ್ತದೆ.

ಈ ತರಬೇತಿಯಲ್ಲಿ:

  • ಮಕ್ಕಳ ಆರೈಕೆ.
  • ಪೌಷ್ಟಿಕ ಆಹಾರ.
  • ಸ್ವಚ್ಛತೆ.
  • ಆರೋಗ್ಯ ಜಾಗೃತಿ.
  • Poshan Tracker App ಬಳಕೆ.
  • ಹೊಸ ಸರ್ಕಾರಿ ಮಾರ್ಗಸೂಚಿಗಳು.

ಇವುಗಳ ಬಗ್ಗೆ ತಿಳಿಸಲಾಗುತ್ತದೆ.


ಗೌರವಧನ

ಅಂಗನವಾಡಿ ಸಹಾಯಕಿಯರಿಗೆ ಸರ್ಕಾರದ ನಿಯಮದಂತೆ ಗೌರವಧನ ನೀಡಲಾಗುತ್ತದೆ. ಆದ್ರೂ ಕೂಡಾ ಇವಾಗಿನ ಪರಿಸ್ಥಿತಿ ನೋಡಿದ್ರೆ ಇಷ್ಟು ಸಂಬಳ ಅವರ ಕುಟುಂಬ ನಡೆಸಲು ಸಾಕಾಗಲ್ಲ ಕಡಿಮೆ ಅಂದ್ರೆ ಅವರಿಗೆ ದಿನ ಗೂಲಿ ಲೆಕ್ಕದಲ್ಲಿ ದಿನಕ್ಕೆ 300 ರೊಕ್ಕ ಕೊಟ್ರ ಹೆಗೊ ಅವರ ಜೀವನ ನಡೆಸಿಗೊಂಡು ಹೊಗ್ತಾರ ಅಲ್ವಾ ಆದಷ್ಟು ಬೇಗ ಸರಕಾರ ಇವರಿಗೂ ಕೂಡಾ ಸಂಬಳಾನ ಜಾಸ್ತಿ ಮಾಡಬಬೇಕು ಅಂತಾ ನನ್ನ ಮತ್ತು ನಿಮ್ಮೆಲ್ಲರ ಪರವಾಗಿ ಸರಕಾರದ ಹತ್ತಿರ ನನ್ನ ಮನವಿ..

ಸರ್ಕಾರ ಕಾಲಕಾಲಕ್ಕೆ ಗೌರವಧನ ಹೆಚ್ಚಳ ಅಥವಾ ಹೊಸ ಆದೇಶಗಳನ್ನು ಹೊರಡಿಸುತ್ತದೆ. ಆದ್ದರಿಂದ ಚಾಲ್ತಿಯಲ್ಲಿರುವ ಮೊತ್ತ ಸರ್ಕಾರದ ಆದೇಶದ ಪ್ರಕಾರ ಬದಲಾಗಬಹುದು.


ಜನರ ಗೌರವವೇ ದೊಡ್ಡ ಬಹುಮಾನ

ಅಂಗನವಾಡಿ ಸಹಾಯಕಿಯರು ಮಾಡುವ ಕೆಲಸ ಸಮಾಜ ಸೇವೆಯೂ ಹೌದು.

ಗ್ರಾಮದ ಮಕ್ಕಳು ಆರೋಗ್ಯವಾಗಿರೋದು, ಗರ್ಭಿಣಿಯರು ಸುರಕ್ಷಿತವಾಗಿರೋದು, ಪೌಷ್ಟಿಕ ಆಹಾರ ಸರಿಯಾಗಿ ತಲುಪೋದು – ಇವೆಲ್ಲವೂ ಅವರ ಸೇವೆಯ ಫಲ.

ಹಣಕ್ಕಿಂತ ಜನರಿಂದ ಸಿಗುವ ಗೌರವವೇ ಅವರಿಗೆ ದೊಡ್ಡ ಬಹುಮಾನ.


ನಮ್ಮ ಶೋರಾಪೂರ ಕಡೆ ಹೇಳೋದಾದ್ರೆ…

“ಅಂಗನವಾಡಿ ಸಹಾಯಕಿ ಅಂದ್ರೆ ಬರೀ ಅಡುಗೆ ಮಾಡೋ ಹೆಂಗಸು ಅಲ್ಲ. ಮಕ್ಕಳನ್ನ ತನ್ನ ಮಕ್ಕಳಂತೆ ನೋಡ್ಕೊಂಡು, ಊಟ ಮಾಡಿಸಿ, ಸ್ವಚ್ಛತೆ ಕಾಪಾಡಿ, ಕಾರ್ಯಕರ್ತೆಯ ಜೊತೆ ಸೇರಿ ಸರ್ಕಾರದ ಯೋಜನೆ ಜನರಿಗೆ ತಲುಪಿಸೋ ಒಬ್ಬ ಸಮಾಜ ಸೇವಕಿ.”


ಯಾವ ತಾಲೂಕಿನಲ್ಲಿ ಎಷ್ಟು ಹುದ್ದೆಗಳು ಅದಾವ ಅಂತಾ ಕೆಳಗಡೆ ವಿವರಣೆ ನೋಡೋಣಾ?

👉 ಶಹಾಪುರಕ್ಕೆ – 12 ಅಂಗನವಾಡಿ ಕಾರ್ಯಕರ್ತೆಯರು, 58 ಅಂಗನವಾಡಿ ಸಹಾಯಕಿಯರು

👉 ಸುರಪುರ – 24 ಅಂಗನವಾಡಿ ಕಾರ್ಯಕರ್ತೆಯರು, 58 ಅಂಗನವಾಡಿ ಸಹಾಯಕಿಯರು

👉 ಯಾದಗಿರಿ – 16 ಅಂಗನವಾಡಿ ಕಾರ್ಯಕರ್ತೆಯರು, 30 ಅಂಗನವಾಡಿ ಸಹಾಯಕಿಯರು

👉 ಗುರುಮಿಠಕಲ್ – 09 ಅಂಗನವಾಡಿ ಕಾರ್ಯಕರ್ತೆಯರು, 25 ಅಂಗನವಾಡಿ ಸಹಾಯಕಿಯರು

ಒಟ್ಟು 61 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 171 ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ.

ಅರ್ಜಿ ಹಾಕೋ ಮಹಿಳೆಯರು ಸಂಬಂಧಿಸಿದ ಅಧಿಸೂಚನೆಯನ್ನು ನೋಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಾರಭದ ದಿನಾಂಕ ಮತ್ತ್ ಕೊನೆಯ ದಿನಾಂಕ:

📅 24-07-2026 ರಿಂದ 24-08-2026ರ ತನಕ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಹುದ್ದೆಗಳ ವಿವರ ಇನ್ನೊಂದು ಸಲಾ ಹಾಕಿನಿ ನೋಡಿ

ಯೋಜನೆ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿ
ಶಹಾಪುರ 12 58
ಸುರಪುರ 24 58
ಯಾದಗಿರಿ 16 30
ಗುರುಮಿಠಕಲ್ 09 25
ಒಟ್ಟು 61 171

ಒಟ್ಟು 61 ಅಂಗನವಾಡಿ ಕಾರ್ಯಕರ್ತೆ ಹಾಗೂ 171 ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನೆ ಕಚೇರಿ, ಭೌತಿಕ ಸೂಚನಾ ಫಲಕ, ಆನ್‌ಲೈನ್ ಮೂಲಕ ಜಿಲ್ಲಾಧಿಕಾರಿಗಳ ಯಾದಗಿರಿ ವೆಬ್‌ಸೈಟ್ ಹಾಗೂ ಜಿಲ್ಲಾ ಪಂಚಾಯತ್ ಯಾದಗಿರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕೋ ಮುಂಚೆ ಈ ವಿಷಯ ಗೊತ್ತಿರಲಿ..!

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಹಾಕೋರು ಮೊದಲು ಇಲಾಖೆ ಹೇಳಿರೋ ಮಾರ್ಗಸೂಚಿ ಓದಿಕೊಳ್ಳಬೇಕು.

ಮಾರ್ಗಸೂಚಿ / ನಿಯಮಗಳು

1) ಅರ್ಜಿ ಹಾಕೋ ಮಹಿಳೆಯರು ಸಂಬಂಧಪಟ್ಟ ಅಧಿಸೂಚನೆಯಲ್ಲಿ ಕೊಟ್ಟಿರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

2) 19 ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಹಾಕಬಹುದು. ಸರ್ಕಾರಿ ನಿಯಮದಂತೆ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಇರುತ್ತದೆ.

ಶೈಕ್ಷಣಿಕ ಅರ್ಹತೆ

👉 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ

  • ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದಿರಬೇಕು.
  • ಅಭ್ಯರ್ಥಿ ಸಲ್ಲಿಸುವ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆ ನಿರ್ಧರಿಸಲಾಗುತ್ತದೆ.
  • ತಕ್ಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ವಿದ್ಯಾರ್ಹತೆ ನೋಡೊಣ ಬನ್ನಿ

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಎಷ್ಟು ಇದಾವ ಅಂತ ನೋಡೋಣ ಇಲ್ಲಿ ಕೆಳಗೆ ಇದೆ.

  • ಪಿಯುಸಿ ಅಥವಾ ಅದಕ್ಕೆ ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ D.S.E.R.T.ಯ ECCE ಡಿಪ್ಲೊಮಾ, JOC ಕೋರ್ಸ್, NTT ಕೋರ್ಸ್ ಸೇರಿದಂತೆ ಸರ್ಕಾರ ಮಾನ್ಯತೆ ನೀಡಿರುವ ಕೋರ್ಸ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಇಂತಹ ಕೋರ್ಸ್ ಮಾಡಿರುವವರಿಗೆ ಆಯ್ಕೆ ವೇಳೆ ಹೆಚ್ಚುವರಿ 5 ಅಂಕಗಳು ಸಿಗುತ್ತವೆ.

ಅಂಗನವಾಡಿ ಸಹಾಯಕಿ ವಿದ್ಯಾರ್ಹತೆ

  • ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್‌.ಎಸ್‌.ಎಲ್‌.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಒಂದು ಗ್ರಾಮ ಪಂಚಾಯಿತಿಯಲ್ಲಿ ಒಂದಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದರೆ, ಆ ಕೇಂದ್ರದ ವ್ಯಾಪ್ತಿಯಲ್ಲಿ ವಾಸಿಸುವ ಹಾಗೂ ಅಲ್ಲಿನ ನಿವಾಸದ ದಾಖಲೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಒಂದೇ ಅಭ್ಯರ್ಥಿಗೆ ಸಮಾನ ಅಂಕಗಳು ಬಂದರೆ, ಸರ್ಕಾರಿ ನಿಯಮದ ಪ್ರಕಾರ ವಯಸ್ಸು ಸೇರಿದಂತೆ ಸಂಬಂಧಿಸಿದ ಮಾನದಂಡಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ .

ಇನ್ನೂ ಕೆಲವು ಮುಖ್ಯ ನಿಯಮಗಳು ಗೊತ್ತಿರಲಿ..!

ವಯಸ್ಸಿನ ಮಿತಿ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಹಾಕೋ ಮಹಿಳೆಯರಿಗೆ 25 ವರ್ಷದವರೆಗೆ ವಯೋಮಿತಿ ಸಡಿಲಿಕೆ ನೀಡುವ ಅವಕಾಶ ಸರ್ಕಾರದ ನಿಯಮದ ಪ್ರಕಾರ ಇರುತ್ತದೆ. ಯಾವ ವರ್ಗಕ್ಕೆ ಎಷ್ಟು ಸಡಿಲಿಕೆ ಅನ್ನೋದು ಇಲಾಖೆಯ ನಿಯಮದಂತೆ ಅನ್ವಯವಾಗುತ್ತದೆ.

👉 ಅಭ್ಯರ್ಥಿಯ ವಯಸ್ಸು ಲೆಕ್ಕ ಹಾಕೋದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಧಾರವಾಗಿಯೇ ಮಾಡಲಾಗುತ್ತದೆ.

ಮೆರಿಟ್ ಪಟ್ಟಿ ಹೇಗೆ ಮಾಡ್ತಾರೆ?

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಬಂದ ಅರ್ಜಿಗಳಲ್ಲಿ ವಿದ್ಯಾರ್ಹತೆ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

👉 ಒಂದು ಹುದ್ದೆಗೆ ಹೆಚ್ಚು ಅರ್ಜಿಗಳು ಬಂದರೆ, ಸರ್ಕಾರದ ನಿಯಮದ ಪ್ರಕಾರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

👉 25% ಮೀಸಲಾತಿ ಇರುವ ವರ್ಗಗಳಿಗೆ ಸರ್ಕಾರದ ನಿಯಮದಂತೆ ಮೀಸಲಾತಿ ಅನ್ವಯವಾಗುತ್ತದೆ.

ಅಭ್ಯರ್ಥಿಗಳ ಆಕ್ಷೇಪಣೆ

👉 ಆಯ್ಕೆ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆ ಇದ್ದರೆ, ಪ್ರಕಟವಾದ ದಿನಾಂಕದಿಂದ 05 ದಿನಗಳೊಳಗೆ ಆನ್‌ಲೈನ್ ಮೂಲಕ ಸಲ್ಲಿಸಬೇಕು.

👉 ಇತರೆ ಯಾವುದೇ ಆಕ್ಷೇಪಣೆ ಅಥವಾ ಮನವಿ ಇದ್ದರೆ, ಅಧಿಸೂಚನೆಯಲ್ಲಿ ತಿಳಿಸಿರುವ ನಿಯಮದಂತೆ 03 ದಿನಗಳೊಳಗೆ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಬಂದ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳು ಈ ವಿಷಯ ಕೂಡ ಗಮನದಲ್ಲಿಡಿ..!

ವಿದ್ಯಾರ್ಹತೆ ಬಗ್ಗೆ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಹಾಕೋರು ತಮ್ಮ ವಿದ್ಯಾರ್ಹತೆಯ ಮೂಲ ದಾಖಲೆ ಹಾಗೂ ಅಂಕಪಟ್ಟಿ ಆಧಾರವಾಗಿಯೇ ಅರ್ಜಿ ಸಲ್ಲಿಸಬೇಕು.

👉 ಅಭ್ಯರ್ಥಿ ಕೊಟ್ಟಿರುವ ಮಾಹಿತಿ ಮತ್ತು ದಾಖಲೆಗಳನ್ನು ಇಲಾಖೆ ಪರಿಶೀಲನೆ ಮಾಡುತ್ತದೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ತಪ್ಪು ಮಾಹಿತಿ ಕೊಟ್ಟಿದ್ದರೆ, ಅಂತಹ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಇಲಾಖೆಗೆ ಇರುತ್ತದೆ.

ಅಂಗವಿಕಲ ಅಭ್ಯರ್ಥಿಗಳಿಗೆ

👉 40% ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

👉 ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ UDID (Unique Disability ID) ಕಾರ್ಡ್ ಹೊಂದಿರಬೇಕು.

👉 ಸರ್ಕಾರದ ನಿಯಮದ ಪ್ರಕಾರ ಅಂಗವಿಕಲ ಅಭ್ಯರ್ಥಿಗಳಿಗೆ ಅನ್ವಯವಾಗುವ ಸೌಲಭ್ಯಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಮೂಲ ದಾಖಲೆಗಳ ಪರಿಶೀಲನೆ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು.

👉 ದಾಖಲೆ ಪರಿಶೀಲನೆಗೆ ಹಾಜರಾಗದಿದ್ದರೆ ಅಥವಾ ದಾಖಲೆಗಳು ಸರಿಯಾಗಿರದಿದ್ದರೆ, ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಬಹುದು.

ಅರ್ಜಿ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳು

  • ✅ ಅರ್ಜಿ ನಕಲು (ಪ್ರಿಂಟ್)
  • ✅ ಎಸ್‌.ಎಸ್‌.ಎಲ್‌.ಸಿ. ಅಂಕಪಟ್ಟಿ
  • ✅ ಜನನ ದಿನಾಂಕದ ದಾಖಲೆ
  • ✅ ತಹಶೀಲ್ದಾರರು ಅಥವಾ ಸಂಬಂಧಪಟ್ಟ ಅಧಿಕಾರಿಯಿಂದ ನೀಡಿರುವ 3 ವರ್ಷದ ನಿವಾಸ ಪ್ರಮಾಣಪತ್ರ
  • ✅ ಶೈಕ್ಷಣಿಕ ಅಂಕಪಟ್ಟಿಗಳು
  • ✅ ಜಾತಿ ಹಾಗೂ ಆದಾಯ ಪ್ರಮಾಣಪತ್ರ (ಅನ್ವಯವಾದರೆ)
  • UDID (Unique Disability ID) ಕಾರ್ಡ್ (ಅಂಗವಿಕಲ ಅಭ್ಯರ್ಥಿಗಳಿಗೆ)
  • ✅ ಇತರೆ ಅಗತ್ಯ ದಾಖಲೆಗಳು (ಅಧಿಸೂಚನೆಯಲ್ಲಿ ತಿಳಿಸಿರುವಂತೆ)

ಅಭ್ಯರ್ಥಿಗಳು ಈ ವಿಷಯ ಕೂಡ ಗಮನದಲ್ಲಿಡಿ..!

ವಿದ್ಯಾರ್ಹತೆ ಬಗ್ಗೆ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಹಾಕೋರು ತಮ್ಮ ವಿದ್ಯಾರ್ಹತೆಯ ಮೂಲ ದಾಖಲೆ ಹಾಗೂ ಅಂಕಪಟ್ಟಿ ಆಧಾರವಾಗಿಯೇ ಅರ್ಜಿ ಸಲ್ಲಿಸಬೇಕು.

👉 ಅಭ್ಯರ್ಥಿ ಕೊಟ್ಟಿರುವ ಮಾಹಿತಿ ಮತ್ತು ದಾಖಲೆಗಳನ್ನು ಇಲಾಖೆ ಪರಿಶೀಲನೆ ಮಾಡುತ್ತದೆ. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ತಪ್ಪು ಮಾಹಿತಿ ಕೊಟ್ಟಿದ್ದರೆ, ಅಂತಹ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಇಲಾಖೆಗೆ ಇರುತ್ತದೆ.

ಅಂಗವಿಕಲ ಅಭ್ಯರ್ಥಿಗಳಿಗೆ

👉 40% ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

👉 ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ UDID (Unique Disability ID) ಕಾರ್ಡ್ ಹೊಂದಿರಬೇಕು.

👉 ಸರ್ಕಾರದ ನಿಯಮದ ಪ್ರಕಾರ ಅಂಗವಿಕಲ ಅಭ್ಯರ್ಥಿಗಳಿಗೆ ಅನ್ವಯವಾಗುವ ಸೌಲಭ್ಯಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಮೂಲ ದಾಖಲೆಗಳ ಪರಿಶೀಲನೆ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು.

👉 ದಾಖಲೆ ಪರಿಶೀಲನೆಗೆ ಹಾಜರಾಗದಿದ್ದರೆ ಅಥವಾ ದಾಖಲೆಗಳು ಸರಿಯಾಗಿರದಿದ್ದರೆ, ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಬಹುದು.

ಅರ್ಜಿ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳು

  • ✅ ಅರ್ಜಿ ನಕಲು (ಪ್ರಿಂಟ್)
  • ✅ ಎಸ್‌.ಎಸ್‌.ಎಲ್‌.ಸಿ. ಅಂಕಪಟ್ಟಿ
  • ✅ ಜನನ ದಿನಾಂಕದ ದಾಖಲೆ
  • ✅ ತಹಶೀಲ್ದಾರರು ಅಥವಾ ಸಂಬಂಧಪಟ್ಟ ಅಧಿಕಾರಿಯಿಂದ ನೀಡಿರುವ 3 ವರ್ಷದ ನಿವಾಸ ಪ್ರಮಾಣಪತ್ರ
  • ✅ ಶೈಕ್ಷಣಿಕ ಅಂಕಪಟ್ಟಿಗಳು
  • ✅ ಜಾತಿ ಹಾಗೂ ಆದಾಯ ಪ್ರಮಾಣಪತ್ರ (ಅನ್ವಯವಾದರೆ)
  • UDID (Unique Disability ID) ಕಾರ್ಡ್ (ಅಂಗವಿಕಲ ಅಭ್ಯರ್ಥಿಗಳಿಗೆ)
  • ✅ ಇತರೆ ಅಗತ್ಯ ದಾಖಲೆಗಳು (ಅಧಿಸೂಚನೆಯಲ್ಲಿ ತಿಳಿಸಿರುವಂತೆ)

ಶಹಾಪುರ, ಸುರಪುರ, ಯಾದಗಿರಿ, ಗುರುಮಿಠಕಲ್‌ನಲ್ಲಿ ಯಾವ ಗ್ರಾಮಕ್ಕೆ ಯಾವ ಅಂಗನವಾಡಿ ಕೇಂದ್ರ ಇದೆ ಗೊತ್ತಾ?

ಅಧಿಸೂಚನೆಯಲ್ಲಿ ಅನುಬಂಧ–01 ಅಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಯೋಜನೆ, ಗ್ರಾಮ/ನಗರ, ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ ಹಾಗೂ ಮೀಸಲಾತಿ ವಿವರ ನೀಡಲಾಗಿದೆ.

ಈ ಮೊದಲ ಪುಟದಲ್ಲಿ ಇರುವ ಪಟ್ಟಿಯ ಪ್ರಕಾರ:

  • ಶಹಾಪುರ ಯೋಜನೆ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳ ವಿವರ ನೀಡಲಾಗಿದೆ.
  • ಸುರಪುರ ಯೋಜನೆ ವ್ಯಾಪ್ತಿಯ ವಿವಿಧ ಅಂಗನವಾಡಿ ಕೇಂದ್ರಗಳ ವಿವರವೂ ಪ್ರಕಟಿಸಲಾಗಿದೆ.
  • ಯಾದಗಿರಿ ಯೋಜನೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಾಹಿತಿಯೂ ಈ ಪಟ್ಟಿಯಲ್ಲಿದೆ.
  • ಪ್ರತಿಯೊಂದು ಹುದ್ದೆಗೆ ಯಾವ ಗ್ರಾಮ, ಯಾವ ಗ್ರಾಮ ಪಂಚಾಯಿತಿ, ಯಾವ ಅಂಗನವಾಡಿ ಕೇಂದ್ರ ಹಾಗೂ ಯಾವ ಮೀಸಲಾತಿ ಅನ್ವಯವಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ನಮೂದಿಸಲಾಗಿದೆ.

👉 ಅಂದರೆ, ಅರ್ಜಿ ಹಾಕುವವರು ತಮ್ಮ ಗ್ರಾಮ, ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿ ಕೇಂದ್ರದ ಹೆಸರನ್ನು ಈ ಪಟ್ಟಿಯಲ್ಲಿ ಚೆನ್ನಾಗಿ ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಉಳಿದ ಪಟ್ಟಿಯ ವಿವರ

ಅಧಿಸೂಚನೆಯ ಅನುಬಂಧ–01ರ ಎರಡನೇ ಪುಟದಲ್ಲಿ ಕ್ರಮ ಸಂಖ್ಯೆ 41 ರಿಂದ 61ರವರೆಗಿನ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ ನೀಡಲಾಗಿದೆ.

ಈ ಪಟ್ಟಿಯಲ್ಲಿ:

  • ಯೋಜನೆಯ ಹೆಸರು
  • ಗ್ರಾಮ / ನಗರ
  • ಗ್ರಾಮ ಪಂಚಾಯಿತಿ
  • ಅಂಗನವಾಡಿ ಕೇಂದ್ರದ ಹೆಸರು
  • ಯಾವ ಮೀಸಲಾತಿಯಲ್ಲಿ ಹುದ್ದೆ ಇದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಈ ಎರಡನೇ ಪುಟದಲ್ಲಿ ಯಾದಗಿರಿ ಹಾಗೂ ಗುರುಮಿಠಕಲ್ ಯೋಜನೆ ವ್ಯಾಪ್ತಿಯ ಉಳಿದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರವನ್ನು ಪ್ರಕಟಿಸಲಾಗಿದೆ.

👉 ಅರ್ಜಿ ಹಾಕುವ ಮಹಿಳೆಯರು ತಮ್ಮ ಗ್ರಾಮ, ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿ ಕೇಂದ್ರದ ಹೆಸರನ್ನು ಈ ಪಟ್ಟಿಯಲ್ಲಿ ಸರಿಯಾಗಿ ನೋಡಿ, ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.

ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ

ಅಧಿಸೂಚನೆಯ ಅನುಬಂಧ–02ರಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರವನ್ನು ಪ್ರಕಟಿಸಲಾಗಿದೆ.

ಈ ಮೊದಲ ಪುಟದಲ್ಲಿ ಈ ಕೆಳಗಿನ ಮಾಹಿತಿಯನ್ನು ನೀಡಲಾಗಿದೆ:

  • ಯೋಜನೆಯ ಹೆಸರು
  • ಗ್ರಾಮ / ನಗರ
  • ಗ್ರಾಮ ಪಂಚಾಯಿತಿ
  • ಅಂಗನವಾಡಿ ಕೇಂದ್ರದ ಹೆಸರು
  • ಇತರೆ ಹಿಂದುಳಿದ ವರ್ಗ / ಸಾಮಾನ್ಯ ವರ್ಗ ಸೇರಿದಂತೆ ಅನ್ವಯವಾಗುವ ಮೀಸಲಾತಿ ವಿವರ

👉 ಈ ಪುಟದಲ್ಲಿ ಶಹಾಪುರ ಯೋಜನೆ ವ್ಯಾಪ್ತಿಯ ವಿವಿಧ ಗ್ರಾಮಗಳ ಅಂಗನವಾಡಿ ಸಹಾಯಕಿಯರ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಲಾಗಿದೆ.

👉 ಅರ್ಜಿ ಹಾಕೋ ಮಹಿಳೆಯರು ತಮ್ಮ ಗ್ರಾಮ, ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿ ಕೇಂದ್ರದ ಹೆಸರನ್ನು ಪಟ್ಟಿಯಲ್ಲಿ ಸರಿಯಾಗಿ ನೋಡಿ, ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.

ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರು ಅರ್ಜಿ ಹಾಕೋರು ಈ ವಿಷಯ ಗೊತ್ತಿರಲಿ..!

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಹಾಕೋ ಮಹಿಳೆಯರು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

I. ಅರ್ಹತೆ

👉 ಮಹಿಳೆಯರು ಮಾತ್ರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

II. ವಯೋಮಿತಿ

👉 ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಹುದ್ದೆಗೆ ಅರ್ಜಿ ಹಾಕೋ ಮಹಿಳೆಯರ ವಯಸ್ಸು 19 ರಿಂದ 35 ವರ್ಷ ಇರಬೇಕು.

👉 ಆದರೆ ಸರ್ಕಾರದ ನಿಯಮದ ಪ್ರಕಾರ ಕೆಲವು ವರ್ಗಗಳಿಗೆ 10 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

III. ನಾಗರಿಕತೆ

  1. ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರಕ್ಕೆ ಅರ್ಜಿ ಹಾಕೋ ಮಹಿಳೆ ಅದೇ ಗ್ರಾಮ ಅಥವಾ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರಬೇಕು. ಅಂತಹ ಅಭ್ಯರ್ಥಿಗೆ ಮೊದಲ ಆದ್ಯತೆ ಇರುತ್ತದೆ.
  2. ಒಂದು ಗ್ರಾಮದಲ್ಲಿ ಅರ್ಹ ಮಹಿಳೆ ಸಿಗದಿದ್ದರೆ, ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೆ ಗ್ರಾಮಗಳ ಮಹಿಳೆಯರನ್ನು ಸರ್ಕಾರದ ನಿಯಮದಂತೆ ಪರಿಗಣಿಸಲಾಗುತ್ತದೆ.
  3. ನಗರ ಪ್ರದೇಶದಲ್ಲಿ ಆಯ್ಕೆ ಮಾಡುವಾಗ ಸ್ಥಳೀಯ ನಿವಾಸಿಗಳಿಗೆ ಸರ್ಕಾರದ ನಿಯಮದಂತೆ ಆದ್ಯತೆ ನೀಡಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಅರ್ಹ ಅಭ್ಯರ್ಥಿ ಸಿಗದಿದ್ದರೆ ಸಂಬಂಧಪಟ್ಟ ನಿಯಮಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

IV. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ

  1. ಪಿಯುಸಿ (PUC) ಉತ್ತೀರ್ಣರಾಗಿರಬೇಕು. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.
  2. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕವಾದ ನಂತರ ಸರ್ಕಾರ ಅಂಗೀಕರಿಸಿರುವ D.S.E.R.T. ವತಿಯಿಂದ ನಡೆಸುವ ECCE ಡಿಪ್ಲೊಮಾ ಕೋರ್ಸ್, JOC ಕೋರ್ಸ್, NTT ಕೋರ್ಸ್ ಸೇರಿದಂತೆ ಸರ್ಕಾರ ನಿಗದಿಪಡಿಸಿದ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಈ ತರಬೇತಿ ಪೂರ್ಣಗೊಳಿಸಿದವರಿಗೆ ಮಾತ್ರ ಸರ್ಕಾರದ ನಿಯಮದಂತೆ ಹೆಚ್ಚುವರಿ 5 ವಾರ್ಷಿಕ ವೇತನ ಬಡ್ತಿ ನೀಡಲಾಗುತ್ತದೆ.

V. ಅಂಗನವಾಡಿ ಸಹಾಯಕಿ ಹುದ್ದೆಗೆ ವಿದ್ಯಾರ್ಹತೆ

👉 ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಹಾಕೋ ಮಹಿಳೆ ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾಗಿರಬೇಕು.

ಅ) ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ಓದಿರುವ ಮಹಿಳೆಯರು ಹಾಗೂ ಪಾಲಕರು ಎಸ್‌.ಎಸ್‌.ಎಲ್‌.ಸಿ. ಅಂಕಪಟ್ಟಿಯಲ್ಲಿರುವ ಅಂಕಗಳ ಆಧಾರದ ಮೇಲೆ ಅರ್ಜಿ ಹಾಕಬೇಕು. ಅಂಕಪಟ್ಟಿಯಲ್ಲಿ ಗ್ರೇಡ್ ಇದ್ದರೆ, ಸರ್ಕಾರ ನಿಗದಿಪಡಿಸಿರುವ 625 ಅಂಕಗಳಿಗೆ ಸಮಾನವಾದ 219 ಅಂಕಗಳ ಪರಿವರ್ತನೆ ನಿಯಮದಂತೆ ಪರಿಗಣಿಸಲಾಗುತ್ತದೆ.

ಆ) ಬೇರೆ ರಾಜ್ಯದಲ್ಲಿ ಓದಿರುವ ಮಹಿಳೆಯರು ಅಥವಾ ಬೇರೆ ಬೋರ್ಡ್‌ನಲ್ಲಿ ಎಸ್‌.ಎಸ್‌.ಎಲ್‌.ಸಿ. ಪಾಸ್ ಆಗಿರುವ ಮಹಿಳೆಯರು, ಕರ್ನಾಟಕ ರಾಜ್ಯಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರುವುದನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ದೃಢೀಕರಿಸಿದ ದಾಖಲೆ ಸಲ್ಲಿಸಬೇಕು.

ಇ) ಸರ್ಕಾರದ ಆದೇಶದ ಪ್ರಕಾರ ಯಾವುದೇ ರಾಜ್ಯದ ಪಠ್ಯಕ್ರಮದಲ್ಲಿ ಓದಿದ್ದರೂ, ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ನಿಯಮಗಳಂತೆ ವಿದ್ಯಾರ್ಹತೆಯನ್ನು ಪರಿಶೀಲಿಸಿ ಅರ್ಹತೆ ನಿರ್ಧರಿಸಲಾಗುತ್ತದೆ.


VI. ಜನಸಂಖ್ಯೆ ಆಧಾರದ ಮೇಲೆ ವಯೋಮಿತಿ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ 25 ವರ್ಷದವರೆಗೆ ವಯೋಮಿತಿ ಸಡಿಲಿಕೆ ಸರ್ಕಾರದ ನಿಯಮದಂತೆ ಅನ್ವಯವಾಗುತ್ತದೆ.

👉 ಈ ಸಡಿಲಿಕೆ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶಗಳಿಗೆ ಅನುಗುಣವಾಗಿ ಮಾತ್ರ ಅನ್ವಯವಾಗುತ್ತದೆ.

👉 ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.


VII. ಅಂಗನವಾಡಿ ಕೇಂದ್ರಗಳ ಸ್ಥಳೀಯ ಗುರುತಿಸುವಿಕೆ

  1. ಒಂದು ಗ್ರಾಮದಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರ ಇದ್ದು, 40% ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಹೊಸ ವಸತಿ ಪ್ರದೇಶ ನಿರ್ಮಾಣವಾಗಿದ್ದರೆ, ಸರ್ಕಾರದ ನಿಯಮದಂತೆ ಹೊಸ ಅಂಗನವಾಡಿ ಕೇಂದ್ರ ಸ್ಥಾಪಿಸುವ ಬಗ್ಗೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಯೂ ಸರ್ಕಾರದ ಮಾರ್ಗಸೂಚಿಯಂತೆ ನಡೆಯುತ್ತದೆ.

VIII. ಆಯ್ಕೆ ಆದ್ಮೇಲೆ ಸಿಗೋ ಸೌಲಭ್ಯಗಳು

1. ಹೆಚ್ಚುವರಿ ವೇತನ ಹೆಚ್ಚಳ

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆಯ್ಕೆಯಾದ ಮಹಿಳೆಯರಿಗೆ ಸರ್ಕಾರದ ನಿಯಮದ ಪ್ರಕಾರ ಹೆಚ್ಚುವರಿ 5 ವೇತನ ಹೆಚ್ಚಳ ನೀಡಲಾಗುತ್ತದೆ.

2. ಗ್ರಾಮ / ನಗರ ಸ್ಥಳೀಯರಿಗೆ ಸಿಗೋ ಸೌಲಭ್ಯ

👉 ಇವರು ತಮ್ಮ ಗ್ರಾಮ ಅಥವಾ ನಗರ ವ್ಯಾಪ್ತಿಯ ನಿವಾಸಿಗಳಾಗಿದ್ದರೆ, ಸರ್ಕಾರದ ನಿಯಮದಂತೆ ಆದ್ಯತೆ ಸಿಗುತ್ತದೆ.

👉 ಸರ್ಕಾರ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಹೆಚ್ಚುವರಿ 10 ವೇತನ ಹೆಚ್ಚಳ ನೀಡುವ ಅವಕಾಶ ಸರ್ಕಾರದ ನಿಯಮದಂತೆ ಇರುತ್ತದೆ.

3. ವಿದ್ಯಾರ್ಹತೆ ಆಧಾರದ ಸೌಲಭ್ಯ

👉 ನೇಮಕಾತಿಯ ನಂತರ ಸರ್ಕಾರ ನಿಗದಿಪಡಿಸಿರುವ ವಿದ್ಯಾರ್ಹತೆ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹೆಚ್ಚುವರಿ 5 ವೇತನ ಹೆಚ್ಚಳ ನೀಡಲಾಗುತ್ತದೆ. ಇದರ ಬಗ್ಗೆ ಸರ್ಕಾರದ ನಿಯಮವೇ ಅನ್ವಯವಾಗುತ್ತದೆ.

4. ಅಂಗವಿಕಲರಿಗೆ ಸೌಲಭ್ಯ

👉 40% ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವ ಮಹಿಳೆಯರಿಗೆ ಸರ್ಕಾರದ ನಿಯಮದಂತೆ ಅವಕಾಶ ನೀಡಲಾಗುತ್ತದೆ.

👉 ಸರ್ಕಾರದ ನಿಯಮದಂತೆ ಅಂಗವಿಕಲ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತದೆ.


IX. ಬೋನಸ್ ಅಂಕಗಳು (ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ)

👉 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ, ಸರ್ಕಾರ ನಿಗದಿಪಡಿಸಿರುವ ಕೆಲವು ವಿಶೇಷ ಅರ್ಹತೆಗಳಿದ್ದರೆ ಹೆಚ್ಚುವರಿ 5 ಬೋನಸ್ ಅಂಕಗಳು ನೀಡಲಾಗುತ್ತದೆ.


X. ಆನ್‌ಲೈನ್ ಅರ್ಜಿ ಜೊತೆಗೆ ಲಗತ್ತಿಸಬೇಕಾದ ದಾಖಲೆಗಳು

  1. ಅರ್ಜಿ ನಕಲು (ಆನ್‌ಲೈನ್ ಪ್ರಿಂಟ್)
  2. ಜನನ ಪ್ರಮಾಣ ಪತ್ರ / ಎಸ್‌.ಎಸ್‌.ಎಲ್‌.ಸಿ. ಅಂಕಪಟ್ಟಿ
  3. ಶೈಕ್ಷಣಿಕ ಅಂಕಪಟ್ಟಿ
  4. ತಹಶೀಲ್ದಾರರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ 3 ವರ್ಷದ ನಿವಾಸ ಪ್ರಮಾಣಪತ್ರ

ಆನ್‌ಲೈನ್ ಅರ್ಜಿ ಜೊತೆಗೆ ಇನ್ನೂ ಈ ದಾಖಲೆಗಳು ಬೇಕು

  1. ಅರ್ಜಿದಾರರ ಜಾತಿ ಪ್ರಮಾಣ ಪತ್ರ.
  2. ತಾಯಿ ಅಥವಾ ತಂದೆಯ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ಅನ್ವಯವಾದರೆ).
  3. ಅಂಗವೈಕಲ್ಯ ಪ್ರಮಾಣ ಪತ್ರ (ಅಂಗವಿಕಲ ಮಹಿಳೆಯರಿಗೆ ಮಾತ್ರ).
  4. ವಿವಾಹ ಪ್ರಮಾಣ ಪತ್ರ (ಅಗತ್ಯ ಇದ್ದರೆ).
  5. ಸರ್ಕಾರದ ನಿಯಮದಂತೆ ಕೇಳಿರುವ ಇತರೆ ಅಗತ್ಯ ದಾಖಲೆಗಳನ್ನು ಕೂಡ ಅಪ್‌ಲೋಡ್ ಮಾಡಬೇಕು.
  6. ಗ್ರಾಮ / ನಗರ ಸ್ಥಳೀಯ ನಿವಾಸಿ ಎಂಬುದಕ್ಕೆ 3 ವರ್ಷದ ನಿವಾಸ ಪ್ರಮಾಣ ಪತ್ರ ಕಡ್ಡಾಯ.
  7. ವಿಚ್ಛೇದನ ಹೊಂದಿರುವ ಮಹಿಳೆಯರು ಸಂಬಂಧಪಟ್ಟ ಪ್ರಮಾಣ ಪತ್ರ ಸಲ್ಲಿಸಬೇಕು.
  8. ಜೈಲಿನಿಂದ ಬಿಡುಗಡೆಗೊಂಡ ಮಹಿಳೆಯರು ಜೈಲು ಇಲಾಖೆಯ ಪ್ರಮಾಣ ಪತ್ರ ಸಲ್ಲಿಸಬೇಕು.
  9. ಎಲ್ಲ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.

XI. ಆಯ್ಕೆ ವಿಧಾನ

  1. ಅರ್ಜಿ ಸಲ್ಲಿಸಿದ ನಂತರ ಒಂದು ತಿಂಗಳೊಳಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
  2. ಅರ್ಜಿ ಸಲ್ಲಿಸಿದವರಿಗೆ ಕನಿಷ್ಠ 7 ದಿನಗಳ ಮೊದಲು ದಾಖಲೆ ಪರಿಶೀಲನೆ ದಿನಾಂಕದ ಮಾಹಿತಿ ನೀಡಲಾಗುತ್ತದೆ.
  3. ಆಯ್ಕೆ ಸಮಿತಿಯ ಎಲ್ಲಾ ಸದಸ್ಯರು ಹಾಜರಿರುವಾಗಲೇ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
  4. ದಾಖಲೆಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ, ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
  5. ಆನ್‌ಲೈನ್ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದರೆ, ಅಂತಹ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸುವುದಿಲ್ಲ.
  6. ವಿದ್ಯಾರ್ಹತೆ, ಮೀಸಲಾತಿ ಹಾಗೂ ಇತರೆ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಅಂಕಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
  7. ದಾಖಲೆ ಪರಿಶೀಲನೆಯ ನಂತರ 7 ದಿನಗಳೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಯಾರಿಗಾದರೂ ಆಕ್ಷೇಪಣೆ ಇದ್ದರೆ ನಿಗದಿತ ಅವಧಿಯಲ್ಲಿ ಸಲ್ಲಿಸಬಹುದು.
  8. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
  9. ಈಗ ನಿಮಗೆ ಎರಡು ಆಯ್ಕೆ ಕಾಣಿಸುತ್ತವೆ.

    ✅ ಅಂಗನವಾಡಿ ಕಾರ್ಯಕರ್ತೆ

    ✅ ಅಂಗನವಾಡಿ ಸಹಾಯಕಿ

    ನೀವು ಯಾವ ಹುದ್ದೆಗೆ ಅರ್ಜಿ ಹಾಕಬೇಕೋ ಅದನ್ನ ಆಯ್ಕೆ ಮಾಡಿ.

  10. ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ. ಯಾವುದೇ ವಿವಾದ ಉಂಟಾದರೆ ಸರ್ಕಾರದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತದೆ.

    ಸಮಾರೋಪ

    ಇವತ್ತಿನ ದಿನದಲ್ಲಿ ಅಂಗನವಾಡಿ ಸಹಾಯಕಿಯರ ಕೆಲಸಕ್ಕೆ ತುಂಬಾ ಮಹತ್ವ ಇದೆ. ಮೊದಲು ಇದ್ದ ಹಾಗೆ ಬರೀ ಕೇಂದ್ರ ಸ್ವಚ್ಛ ಮಾಡೋ ಕೆಲಸ ಮಾತ್ರ ಅಲ್ಲ. ಮಕ್ಕಳ ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ, ಗರ್ಭಿಣಿಯರ ಆರೈಕೆ, ಬಾಣಂತಿಯರ ಸೇವೆ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು, ಡಿಜಿಟಲ್ ವ್ಯವಸ್ಥೆಗೆ ಸಹಕಾರ – ಹೀಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದಾರೆ.

    ಒಂದು ಅಂಗನವಾಡಿ ಕೇಂದ್ರ ಯಶಸ್ವಿಯಾಗಿ ನಡೆಯಬೇಕಂದ್ರೆ ಕಾರ್ಯಕರ್ತೆ ಮತ್ತು ಸಹಾಯಕಿ ಇಬ್ಬರೂ ಒಂದೇ ತಂಡವಾಗಿ ಕೆಲಸ ಮಾಡಬೇಕು. ಒಬ್ಬರಿಲ್ಲದೆ ಇನ್ನೊಬ್ಬರ ಕೆಲಸ ಸಂಪೂರ್ಣ ಆಗೋದಿಲ್ಲ. ಇಬ್ಬರು ಒಂದೆ ಕುಂಬದಲ್ಲಿ ಅಕ್ಕಾ – ತಂಗಿತರಾ ಇರಬೇಕು.  ಅದಕ್ಕಾಗಿಯೇ ಅಂಗನವಾಡಿ ಸಹಾಯಕಿಯ ಹುದ್ದೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸೇವೆಯಾಗಿದೆ.

    ಅಂಗನವಾಡಿ ಅರ್ಜಿ ಹಾಕೋದಕ್ಕೆ ಮೊದಲು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಇರಬೇಕು. ಕೆಳಗಿರುವ ಸ್ಟೆಪ್‌ಗಳನ್ನು ಒಂದೊಂದಾಗಿ ಮಾಡಿದ್ರೆ ಸುಲಭವಾಗಿ ಅರ್ಜಿ ಹಾಕಬಹುದು. ಒಂದು ಅರ್ಜಿ Demo ಕೂಡಾ ಕೆಳಗಡೆ ಕೊಟ್ಟಿನಿ ಅದೆ ರೀತಿ ಇರ್ತಾದ ನೋಡಿ ಗೆಳೆತಿಯರೆ…..

    Step 1: ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ

    ಮೊದಲು ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ Women & Child Development Department Karnataka ಅಧಿಕೃತ ನೇಮಕಾತಿ ವೆಬ್‌ಸೈಟ್ ಓಪನ್ ಮಾಡಿ. ಇಲ್ಲಾಂದ್ರೆ ನಾವು ಕಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಮುಂದೆ ಸಾಗಿ.

    👉 ಅಲ್ಲಿ “ಅಂಗನವಾಡಿ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಲಿಂಕ್ “ ಅಂತ ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ಸೇವಾ ಸಿಂಧುವಿನ ಪೋರ್ಟಲ್ ಅಲ್ಲೆ ಓಪನ್ ಆಗಿರುತ್ತೆ ಅಲ್ಲಿಂದಾನೂ ಅರ್ಜಿ ಹಾಕಬಹುದು.

    Step 2: ಹುದ್ದೆಯ ಮಾಹಿತಿ / Vacancy Details


Step 3: ವೈಯಕ್ತಿಕ ಮಾಹಿತಿ / Personal Details


Step 4: ಪತ್ರವ್ಯವಹಾರಕ್ಕಾಗಿ ವಿವರಗಳು / Details for Correspondence


Step 5: ಅಗತ್ಯ ಅರ್ಹತೆ / Essential Qualification

  ಇಲ್ಲ / No


Step 6: ಇತರೆ ವಿದ್ಯಾರ್ಹತೆಯ ವಿವರಗಳು / Other Qualification Details


Step 7: ಇತರೆ ಮಾಹಿತಿಗಳು / Other Details

Click here to select date

Step 8: ಘೋಷಣೆ / Declaration

Word verification

 
Please enter the characters shown above


Step 9: ದಾಖಲೆ Upload ಮಾಡಿ

ಈಗ Notificationನಲ್ಲಿ ಕೇಳಿರುವ ದಾಖಲೆಗಳನ್ನು Upload ಮಾಡಿ.

ಉದಾಹರಣೆಗೆ

✅ SSLC Marks Card

✅ Aadhaar Card

✅ Caste Certificate

✅ Residence Certificate

✅ Photo

✅ Signature

ಇತರೆ ದಾಖಲೆಗಳು.


Step 11: Preview ನೋಡಿ

Submit ಮಾಡೋದಕ್ಕಿಂತ ಮೊದಲು

ಒಮ್ಮೆ ಎಲ್ಲಾ ಮಾಹಿತಿ ಸರಿಯಿದೆಯಾ ಅಂತ ಚೆಕ್ ಮಾಡಿ.

ತಪ್ಪಿದ್ದರೆ Edit ಮಾಡಿ.


Step 12: Final Submit

ಎಲ್ಲಾ ಮಾಹಿತಿ ಸರಿಯಾಗಿದ್ದರೆ

Final Submit ಮೇಲೆ ಕ್ಲಿಕ್ ಮಾಡಿ.


Step 13: Application Print

Submit ಆದ್ಮೇಲೆ

Application PDF Download ಮಾಡಿ.

ಒಂದು Print ತೆಗೆದು ಇಟ್ಟುಕೊಳ್ಳಿ.

ಮುಂದೆ ದಾಖಲೆ ಪರಿಶೀಲನೆ ಸಮಯದಲ್ಲಿ ಬೇಕಾಗಬಹುದು.


ಅರ್ಜಿ ಹಾಕೋವಾಗ ನೆನಪಿಡಿ

✅ ಎಲ್ಲಾ ದಾಖಲೆಗಳು ಸ್ಪಷ್ಟವಾಗಿರಬೇಕು.

✅ Photo ಹೊಸದಾಗಿರಬೇಕು.

✅ ಮೊಬೈಲ್ ನಂಬರ್ ಚಾಲ್ತಿಯಲ್ಲಿರಬೇಕು.

✅ ತಪ್ಪು ಮಾಹಿತಿ ಹಾಕಬೇಡಿ.

✅ ಕೊನೆಯ ದಿನದವರೆಗೆ ಕಾಯಬೇಡಿ.


ನಮ್ಮ ಶೋರಾಪೂರ ಕಡೆ ಹೇಳಬೇಕಂದ್ರೆ…

“ಮೊದಲು ವೆಬ್‌ಸೈಟ್ ಓಪನ್ ಮಾಡ್ರಿ, ನಿಮ್ಮ ಜಿಲ್ಲೆ ಆಯ್ಕೆ ಮಾಡ್ರಿ, ಯಾವ ಹುದ್ದೆಗೆ ಹಾಕಬೇಕೋ ಅದನ್ನ ಸೆಲೆಕ್ಟ್ ಮಾಡ್ರಿ. ಆಮೇಲೆ ನಿಮ್ಮ ಮಾಹಿತಿ, ಓದಿನ ವಿವರ, ಜಾತಿ, ವಿಳಾಸ ಎಲ್ಲ ಸರಿಯಾಗಿ ತುಂಬಿ. ಕೇಳಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಕೊನೆಯಲ್ಲಿ ಒಮ್ಮೆ ಚೆಕ್ ಮಾಡಿ Submit ಮಾಡಿ. ಅರ್ಜಿ Submit ಆದ್ಮೇಲೆ ಅದರ PDF ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದು ಇಟ್ಕೊಳ್ಳಿ. ಅಷ್ಟೇ, ನಿಮ್ಮ ಅಂಗನವಾಡಿ ಅರ್ಜಿ ಯಶಸ್ವಿಯಾಗಿ ಸಲ್ಲಿಕೆ ಆಗಿರುತ್ತೆ.”

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Read More: Tumakuru District Court Recruitment 2026: PUC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ, ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್ ಸೇರಿ 24 ಹುದ್ದೆಗಳಿಗೆ ಅರ್ಜಿ ಆರಂಭ!

KPTCL ನಲ್ಲಿ 1,200 ಹುದ್ದೆ ಭರ್ತಿ ಗುರು..! SSLC, PUC ಓದಿದೋರಿಗೆ ದೊಡ್ಡ ಚಾನ್ಸ್ – ಶೀಘ್ರದಲ್ಲೇ ನೋಟಿಫಿಕೇಶನ್ ಬರೋ ಸಾಧ್ಯತೆ!

SSLC & PUC Passing Package 2026: ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್, Mock Test, Revision Guide – ಸಂಪೂರ್ಣ ಮಾಹಿತಿ!

2nd PUC ಆದವರಿಗೆ ಭರ್ಜರಿ ಸರ್ಕಾರಿ ಉದ್ಯೋಗ! ಕರ್ನಾಟಕ ಲೋಕಾಯುಕ್ತದಲ್ಲಿ Clerk & Fingerprint Assistant ನೇಮಕಾತಿ 2026 – ₹67,600 ವೇತನ!

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನೇಮಕಾತಿ 2026: 750 ಹುದ್ದೆಗಳಿಗೆ ಪದವೀಧರರಿಗೆ ಭರ್ಜರಿ ಅವಕಾಶ! ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ₹15,000 ವರೆಗೆ ಸ್ಟೈಪೆಂಡ್!

ಶಿಕ್ಷಕರಾಗುವ ಕನಸು ಇದೆಯೇ? KREISನಲ್ಲಿ 1,087 ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಇನ್ನೂ ಸಮಯ ಇದೆ!

ಕರ್ನಾಟಕದಲ್ಲಿ 4,723 ಸರ್ಕಾರಿ ಹುದ್ದೆಗಳ ಭರ್ತಿ: ಪೊಲೀಸ್, ಪಶುಸಂಗೋಪನೆ, VAO ಸೇರಿದಂತೆ ಹಲವು ಇಲಾಖೆಗಳಲ್ಲಿ ಶೀಘ್ರ ನೇಮಕಾತಿ!

ಧಾರವಾಡದಲ್ಲಿ ಮನಕಲಕುವ ಘಟನೆ: ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡಿದ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್!

 ಗ್ರಾಮೀಣ ಬಡಿಗೆತನ ವೃತ್ತಿಪರರಿಗೆ ಉಚಿತ ಉಪಕರಣ ಯೋಜನೆ 2026: ಅರ್ಹತೆ, ದಾಖಲೆಗಳು, ವಯೋಮಿತಿ, ಅರ್ಜಿ ವಿಧಾನ ಸಂಪೂರ್ಣ ಮಾಹಿತಿ!

ಯಾದಗಿರಿ ಉಚಿತ ಎಲೆಕ್ಟ್ರಿಕಲ್ ಹೊಲಿಗೆ ಯಂತ್ರ ಯೋಜನೆ 2026: ಮಹಿಳೆಯರಿಗೆ ಅರ್ಜಿ ಆಹ್ವಾನ | ಅರ್ಹತೆ, ದಾಖಲೆಗಳು, ಕೊನೆಯ ದಿನಾಂಕ!

ಕರ್ನಾಟಕ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ 2026: 572 ಹುದ್ದೆಗಳಿಗೆ ಅರ್ಜಿ ಆಹ್ವಾನ | PUC ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಸರ್ಕಾರಿ ಉದ್ಯೋಗ ಅವಕಾಶ!

Leave a Comment