ನಮ್ಮ ಬಗ್ಗೆ – ಒಂದು ಸಣ್ಣ ಪರಿಚಯ
ನಮಸ್ಕಾರ ಅಣ್ಣಾ, ಅಕ್ಕಾ, ತಮ್ಮಂದಿರೆ…
ನನ್ನ ಹೆಸರು ಸಂಗಮೇಶ ಹಾವೇರಿ. ನಮ್ಮ ಊರು ಯಾದಗಿರಿ ಜಿಲ್ಲೆ, ಈಗಿನ ಹುಣಸಗಿ ತಾಲೂಕು, ದ್ಯಾಮನಹಾಳ ಗ್ರಾಮ. ನಾನು ನಡೆಸ್ತಿರೋ Online Service Centre ನಮ್ಮ ಊರಿಂದ ಸುಮಾರು 2 ಕಿಲೋಮೀಟರ್ ದೂರದ ಬಲಶೆಟ್ಟಿಹಾಳ ಗ್ರಾಮದಲ್ಲಿ ಇದೆ.
ನಮ್ಮ ಆನ್‌ಲೈನ್ ಸೆಂಟರ್‌ನಲ್ಲಿ ದಿನಾಲು ಸುಮಾರು 70 ರಿಂದ 100 ಅರ್ಜಿಗಳವರೆಗೆ ಹಾಕ್ತಿರ್ತೀವಿ. ಸರ್ಕಾರಿ ಯೋಜನೆಗಳು, ಉದ್ಯೋಗ ಅರ್ಜಿಗಳು, ವಿದ್ಯಾರ್ಥಿವೇತನ, ರೇಷನ್ ಕಾರ್ಡ್, ಪಿಂಚಣಿ, ಪೊಲೀಸ್ ನೇಮಕಾತಿ, ಬ್ಯಾಂಕ್, ರೈಲ್ವೆ, SSC, UPSC, KCET, NEET, PAN, Aadhaar ಸೇರಿದಂತೆ ಹಲವಾರು ರೀತಿಯ ಆನ್‌ಲೈನ್ ಅರ್ಜಿಗಳನ್ನು ಅನುಭವದೊಂದಿಗೆ ಸಲ್ಲಿಸುತ್ತೇವೆ.
ಯಾವ ಅರ್ಜಿಗೆ ಯಾವ ದಾಖಲೆ ಬೇಕು, ಯಾವ ಸೈಜ್ ಫೋಟೋ ಬೇಕು, ಯಾವ ಫಾರ್ಮ್ಯಾಟ್‌ನಲ್ಲಿ (PDF, JPG, JPEG, PNG) ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಅನ್ನೋ ಸಂಪೂರ್ಣ ಮಾಹಿತಿ ನಮಗಿದೆ. ಆದ್ದರಿಂದ ಇಲ್ಲಿವರೆಗೂ ನಮ್ಮ ಹತ್ತಿರ ಅರ್ಜಿ ಹಾಕಿಸಿಕೊಂಡ ಯಾವುದೇ ಗ್ರಾಹಕರ ಅರ್ಜಿಯನ್ನು ತಪ್ಪಾಗಿ ಸಲ್ಲಿಸಿರುವ ಘಟನೆ ನಡೆದಿಲ್ಲ. ಪ್ರತಿಯೊಂದು ಅರ್ಜಿಯನ್ನೂ ತುಂಬಾ ಜಾಗರೂಕತೆಯಿಂದ, ಸರಿಯಾಗಿ ಪರಿಶೀಲಿಸಿ ಸಲ್ಲಿಸುತ್ತೇವೆ.
ಇನ್ನೊಂದು ಮುಖ್ಯ ವಿಷಯ ಏನಂದ್ರೆ, ಹಲವರಿಗೆ Online Payment ಮಾಡುವ ಸೌಲಭ್ಯ ಇರೋದಿಲ್ಲ. ಅಂತಹ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಅರ್ಜಿ ಶುಲ್ಕವನ್ನು ಮಾತ್ರ ಪಡೆದು, ನಮ್ಮ UPI, Debit Card, Credit Card ಅಥವಾ Net Banking ಮೂಲಕ ನಾವು ಪಾವತಿ ಮಾಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ, ಅದರ ರಸೀದಿ ಹಾಗೂ ಅರ್ಜಿಯ ಪ್ರತಿಯನ್ನು ನೀಡುತ್ತೇವೆ.
ನಮ್ಮ ವಿಶೇಷ ಸೇವೆ
ನಿಮಗೆ ನಮ್ಮಿಂದ ಅರ್ಜಿ ಹಾಕಿಸಿಕೊಳ್ಳಬೇಕು ಅಂದ್ರೆ, ಅರ್ಜಿ ಹಾಕುವ ಸೇವೆಗೆ ಯಾವುದೇ Service Charge ಇರುವುದಿಲ್ಲ. ನೀವು ಅರ್ಜಿ ಶುಲ್ಕ (Application Fee) ಹಾಗೂ Bank/Payment Gateway Service Charge ಇದ್ದರೆ ಅದನ್ನು ಮಾತ್ರ ಪಾವತಿಸಬೇಕು. ಅರ್ಜಿ ಭರ್ತಿ ಮಾಡುವುದಕ್ಕೆ ನಾವು ಯಾವುದೇ ಪ್ರತ್ಯೇಕ ಹಣ ಪಡೆಯುವುದಿಲ್ಲ.
ನೀವು ಮಾಡಬೇಕಾದದ್ದು ಇಷ್ಟೇ
ನಿಮ್ಮ ದಾಖಲೆಗಳ Xerox Copy ಅಥವಾ ಸ್ಪಷ್ಟವಾದ ಫೋಟೋಗಳನ್ನು ನಮ್ಮ WhatsApp ಅಥವಾ E-mail ಗೆ ಕಳುಹಿಸಿ. ಉಳಿದ ಎಲ್ಲ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.
- ದಾಖಲೆಗಳನ್ನು ಪರಿಶೀಲಿಸುತ್ತೇವೆ.
- ಅಗತ್ಯವಿದ್ದರೆ PDF ಅಥವಾ Photo Format ಗೆ ಪರಿವರ್ತಿಸುತ್ತೇವೆ.
- ಫೋಟೋ ಹಾಗೂ ಸಹಿಯನ್ನು ಬೇಕಾದ ಅಳತೆಗೆ ತಯಾರಿಸುತ್ತೇವೆ.
- ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸುತ್ತೇವೆ.
- Online Payment ಮಾಡಿ ಅರ್ಜಿಯ ಪ್ರಿಂಟ್ ಅಥವಾ PDF ಪ್ರತಿಯನ್ನು ನಿಮಗೆ ಕಳುಹಿಸುತ್ತೇವೆ.
ನಮ್ಮ ಉದ್ದೇಶ ಹಣ ಸಂಪಾದಿಸುವುದಕ್ಕಿಂತ, ಗ್ರಾಮೀಣ ಭಾಗದ ಜನರಿಗೆ ಸರಿಯಾದ ರೀತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇವೆಗಳು ಸುಲಭವಾಗಿ ದೊರಕುವಂತೆ ನೆರವಾಗುವುದು.
ಸಂಪರ್ಕಿಸಿ
📞 ಮೊಬೈಲ್: 9071322058 / 7259752321
📧 E-mail: sangamesh.haveri@gmail.com
ಒಮ್ಮೆ ಸೇವೆ ಪಡೆದು ನೋಡಿ… ನಮ್ಮ ಕೆಲಸದ ಮೇಲೆ ನಿಮಗೆ ಖಂಡಿತಾ ನಂಬಿಕೆ ಬರುತ್ತದೆ. ಉತ್ತರ ಕರ್ನಾಟಕದ ಜನರಿಗೆ ಸರಳವಾಗಿ, ನಿಷ್ಠೆಯಿಂದ ಮತ್ತು ಸಮಯಕ್ಕೆ ಸರಿಯಾಗಿ ಸೇವೆ ನೀಡುವುದು ನಮ್ಮ ಮೊದಲ ಆದ್ಯತೆ.
ಕರ್ನಾಟಕ ಕ್ರೀಡಾ ವಿದ್ಯಾರ್ಥಿವೇತನ 2028-29: ಪ್ರತಿಭಾವಂತ ಕ್ರೀಡಾಪಟುಗಳಿಗೆ ಸುವರ್ಣಾವಕಾಶ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆಗಳು, ಉತ್ತಮ ತರಬೇತಿಯ ಕೊರತೆ, ಪೌಷ್ಟಿಕ ಆಹಾರದ ಅಭಾವ ಹಾಗೂ ಕ್ರೀಡಾ ಪರಿಕರಗಳ ವೆಚ್ಚದಿಂದ ಅನೇಕ ಪ್ರತಿಭೆಗಳು ಮಧ್ಯದಲ್ಲೇ ತಮ್ಮ ಕನಸನ್ನು ಕೈಬಿಡುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಪ್ರತಿ ವರ್ಷ ಕ್ರೀಡಾ ವಿದ್ಯಾರ್ಥಿವೇತನ ಹಾಗೂ ಸರ್ಕಾರಿ ಕ್ರೀಡಾ ವಸತಿ ನಿಲಯ ಯೋಜನೆ ಜಾರಿಗೊಳಿಸುತ್ತದೆ.
2028-29ನೇ ಶೈಕ್ಷಣಿಕ ಸಾಲಿಗೂ ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಜೊತೆಗೆ ಉಚಿತ ವಸತಿ, ಪೌಷ್ಟಿಕ ಆಹಾರ, ಕ್ರೀಡಾ ತರಬೇತಿ ಹಾಗೂ ಹಲವು ವಿಶೇಷ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತದೆ.
ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಉತ್ತಮ ವೇದಿಕೆ ದೊರೆಯುತ್ತದೆ.
ಕ್ರೀಡಾ ವಿದ್ಯಾರ್ಥಿವೇತನ ಯೋಜನೆಯ ಮುಖ್ಯ ಉದ್ದೇಶ
ಕರ್ನಾಟಕ ಸರ್ಕಾರದ ಈ ಯೋಜನೆಯ ಪ್ರಮುಖ ಉದ್ದೇಶ ಕೇವಲ ಹಣಕಾಸಿನ ನೆರವು ನೀಡುವುದಲ್ಲ. ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸಮರ್ಪಕ ತರಬೇತಿ ಹಾಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಡುವುದು.
ಯೋಜನೆಯ ಪ್ರಮುಖ ಉದ್ದೇಶಗಳು:
- ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವುದು.
- ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕ್ರೀಡಾ ಅವಕಾಶ ಕಲ್ಪಿಸುವುದು.
- ಉಚಿತ ವಸತಿ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು.
- ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸುವುದು.
- ವೈಜ್ಞಾನಿಕ ತರಬೇತಿ ಮೂಲಕ ಉತ್ತಮ ಸಾಧನೆಗೆ ಉತ್ತೇಜನ ನೀಡುವುದು.
- ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಹಾಗೂ ಆತ್ಮವಿಶ್ವಾಸ ಬೆಳೆಸುವುದು.
ಯೋಜನೆಯ ಪ್ರಮುಖ ವಿಶೇಷತೆಗಳು
ಈ ಯೋಜನೆ ಸಾಮಾನ್ಯ ವಿದ್ಯಾರ್ಥಿವೇತನಕ್ಕಿಂತ ಭಿನ್ನವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಣದ ಜೊತೆಗೆ ಕ್ರೀಡಾ ಜೀವನಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲ ದೊರೆಯುತ್ತದೆ.
ಯೋಜನೆಯ ಪ್ರಮುಖ ಸೌಲಭ್ಯಗಳು:
- ವಾರ್ಷಿಕ ಕ್ರೀಡಾ ವಿದ್ಯಾರ್ಥಿವೇತನ
- ಸರ್ಕಾರಿ ಕ್ರೀಡಾ ವಸತಿ ನಿಲಯ ಪ್ರವೇಶ
- ಉಚಿತ ಊಟ ಹಾಗೂ ವಸತಿ
- ಪೌಷ್ಟಿಕ ಆಹಾರ
- ಉಚಿತ ಕ್ರೀಡಾ ಕಿಟ್
- ಟ್ರ್ಯಾಕ್ ಸೂಟ್
- ತರಬೇತಿ ಸಾಮಗ್ರಿಗಳು
- ಅನುಭವಿ ಕೋಚ್‌ಗಳಿಂದ ತರಬೇತಿ
- ವೈದ್ಯಕೀಯ ನೆರವು
- ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ
ವಿದ್ಯಾರ್ಥಿವೇತನದ ಮೊತ್ತ ಎಷ್ಟು?
ಕ್ರೀಡಾಪಟು ಏನು ಸಾಧನೆ ಮಾಡಿರುತ್ತಾನೋ ಅದರ ಆಧಾರದ ಮೇಲೆ ವಿದ್ಯಾರ್ಥಿಗೆ ವಿದ್ಯಾರ್ಥಿವೇತನವನ್ನು ಸರ್ಕಾರ ನೀಡುತ್ತದೆ.
| ಕ್ರೀಡಾ ಮಟ್ಟ | ವಿದ್ಯಾರ್ಥಿವೇತನ |
|---|---|
| ರಾಷ್ಟ್ರಮಟ್ಟದ ಸಾಧಕರಿಗೆ | ₹25,000 ವಾರ್ಷಿಕ |
| ರಾಜ್ಯಮಟ್ಟದ ಸಾಧಕರಿಗೆ | ₹18,000 ವಾರ್ಷಿಕ |
| ಕ್ರೀಡಾ ವಸತಿ ನಿಲಯ ವಿದ್ಯಾರ್ಥಿಗಳು | ಉಚಿತ ವಸತಿ ಮತ್ತು ಆಹಾರ |
ಇದರ ಜೊತೆಗೆ ಸರ್ಕಾರದಿಂದ:
- ಕ್ರೀಡಾ ಕಿಟ್ ಕೂಡಾ ಸಿಗುತ್ತದೆ.
- ಟ್ರ್ಯಾಕ್ ಸೂಟ್ ಸಿಗುತ್ತದೆ.
- ವೈದ್ಯಕೀಯ ಸೌಲಭ್ಯ ಸಿಗುತ್ತದೆ.
- ತರಬೇತಿ ಕೂಡಾ ದೊರೆಯುತ್ತದೆ
- ಪೌಷ್ಟಿಕ ಆಹಾರ ಸಿಗುತ್ತದೆ.
ಇಷ್ಟೆಲ್ಲಾನೂ ಪ್ರತಿಯೋಬ್ಬ ಕ್ರೀಡಾ ಪಟುಗಳಿಗೆ ಸರಕಾರದಿಂದ ಉಚಿತವಾಗಿ ನೀಡುತ್ತದೆ.
ಕ್ರೀಡಾ ವಸತಿ ನಿಲಯದಲ್ಲಿ ಏನೇನು ಸೌಲಭ್ಯಗಳು ಇದಾವೆ ಅನ್ನುವುದರ ಬಗ್ಗೆ
ಸರ್ಕಾರಿ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಅವುಗಳಲ್ಲಿ:
- ಸಂಪೂರ್ಣ ಉಚಿತ ವಸತಿ
- ದಿನಕ್ಕೆ ಹಲವು ಬಾರಿ ಪೌಷ್ಟಿಕ ಆಹಾರ
- ಬೆಳಗ್ಗೆ ಹಾಗೂ ಸಂಜೆ ತರಬೇತಿ
- ವಿಶೇಷ ಜಿಮ್
- ಫಿಟ್ನೆಸ್ ತರಬೇತಿ
- ವೈದ್ಯಕೀಯ ತಪಾಸಣೆ
- ಮಾನಸಿಕ ಆರೋಗ್ಯ ಸಲಹೆ
- ಸ್ಪರ್ಧಾತ್ಮಕ ತರಬೇತಿ
- ಶಿಕ್ಷಣದ ಜೊತೆಗೆ ಕ್ರೀಡೆಗೆ ಸಮಾನ ಅವಕಾಶ
ಇವುಗಳಿಂದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಒತ್ತಡವಿಲ್ಲದೆ ತಮ್ಮ ಕ್ರೀಡಾ ಜೀವನವನ್ನು ಮುಂದುವರಿಸಬಹುದು.
ಯಾರು ಯಾರು ಅರ್ಜಿ ಸಲ್ಲಿಸಬಹುದು? ಇದಕ್ಕೆ ಎನ್ನುವುದರ ಬಗ್ಗೆ ವಿವರಣೆ.
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದರೆ ನಮ್ಮ ಕರ್ನಾಟಕ ಸರಕಾರ ಕೆಲವು ಮೂಲಭೂತ ಅರ್ಹತೆಗಳನ್ನು ನಿಗದಿಪಡಿಸಿದೆ. ಅವು ಈ ಕೆಳಗಿನಂತಿದೆ.
ಅಭ್ಯರ್ಥಿಯು:
- ಕರ್ನಾಟಕದ ನಿವಾಸಿಯಾಗಿರಬೇಕು.
- ಕನಿಷ್ಠ 7 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು.
- ಸರ್ಕಾರಿ ಅಥವಾ ಮಾನ್ಯತೆ ಪಡೆದ ಶಾಲೆ/ಕಾಲೇಜಿನಲ್ಲಿ ಓದುತ್ತಿರಬೇಕು.
- ಕ್ರೀಡಾ ಸಾಧನೆ ಹೊಂದಿರಬೇಕು.
- ನಿಗದಿತ ವಯೋಮಿತಿಯೊಳಗಿರಬೇಕು.
ವಯಸ್ಸಿನ ಮಿತಿಯ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ
ವಿದ್ಯಾರ್ಥಿಗಳ ಶಿಕ್ಷಣದ ಹಂತದ ಆಧಾರದ ಮೇಲೆ ವಯಸ್ಸನ್ನು ನಿಗದಿಪಡಿಸಲಾಗಿದೆ.
| ವಿಭಾಗ | ವಯಸ್ಸು |
|---|---|
| ಶಾಲಾ ವಿದ್ಯಾರ್ಥಿಗಳು | 10 ರಿಂದ 16 ವರ್ಷ |
| ಕಾಲೇಜು ವಿದ್ಯಾರ್ಥಿಗಳು | 17 ರಿಂದ 23 ವರ್ಷ |
ಕ್ರೀಡಾ ಸಾಧನೆಯ ಅರ್ಹತೆ ಏಷ್ಠಿರಬೇಕು ಎನ್ನುವುದರ ಬಗ್ಗೆ ತಿಳಿಯೋಣ…
ಕೇವಲ ಓದಿನಲ್ಲಿ ಉತ್ತಮ ಅಂಕ ಪಡೆದರೆ ಸಾಕಾಗುವುದಿಲ್ಲ.
ಅಭ್ಯರ್ಥಿಯು:
- ಕಳೆದ ಎರಡು ವರ್ಷಗಳಲ್ಲಿ ರಾಜ್ಯಮಟ್ಟ ಅಥವಾ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರಬೇಕು.
- ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆದಿರಬೇಕು.
- ಅಧಿಕೃತ ಕ್ರೀಡಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿರಬೇಕು.
- ತಂಡದ ಆಟವಾಗಿದ್ದರೆ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ಇವೆಲ್ಲವನ್ನು ನೀವು ಹೊಂದಿದ್ರೆ ಮಾತ್ರ ಅರ್ಜಿ ಹಾಕೊಕೆ ಅರ್ಹರು ಇಲ್ಲಾಂದರೆ ಅರ್ಜಿ ಹಾಕೋಕೆ ಹೋಗಬೇಡಿ ದಯವಿಟ್ಟು ನಿಮ್ಮ ಟೈಮ್ ನ್ನು ಹಾಳು ಮಾಡಕೊಬೇಡಿ
ಯಾವ ಕ್ರೀಡೆಗಳಿಗೆ ಇಲ್ಲಿ ಅವಕಾಶ? ಎಂದು ತಿಳಿಯೋಣ
ಈ ಯೋಜನೆಯಡಿ ವಿವಿಧ ವೈಯಕ್ತಿಕ ಹಾಗೂ ತಂಡದ ಕ್ರೀಡೆಗಳಿಗೆ ಅವಕಾಶ ನೀಡಲಾಗುತ್ತದೆ.
ಉದಾಹರಣೆಗೆ:
- ಅಥ್ಲೆಟಿಕ್ಸ್
- ಕಬಡ್ಡಿ
- ಖೋ-ಖೋ
- ವಾಲಿಬಾಲ್
- ಬಾಸ್ಕೆಟ್‌ಬಾಲ್
- ಫುಟ್ಬಾಲ್
- ಹಾಕಿ
- ಈಜು
- ಬ್ಯಾಡ್ಮಿಂಟನ್
- ಟೇಬಲ್ ಟೆನಿಸ್
- ಕುಸ್ತಿ
- ಬಾಕ್ಸಿಂಗ್
- ಜೂಡೋ
- ತೈಕ್ವಾಂಡೋ
- ಆರ್ಚರಿ
- ವೇಟ್ ಲಿಫ್ಟಿಂಗ್
- ಸೈಕ್ಲಿಂಗ್
- ಶೂಟಿಂಗ್
- ಯೋಗ
- ಇನ್ನಿತರ ಸರ್ಕಾರದಿಂದ ಮಾನ್ಯತೆ ಪಡೆದ ಕ್ರೀಡೆಗಳು.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೊಣ.
ನಮ್ಮ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲುಕ ಸೇರಿಸಿ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾ ವಿದ್ಯಾರ್ಥಿವೇತನ ಹಾಗೂ ಕ್ರೀಡಾ ವಸತಿ ನಿಲಯಗಳಿಗೆ ಅಭ್ಯರ್ಥಿಗಳನ್ನು ಕೇವಲ ಅರ್ಜಿ ಸಲ್ಲಿಕೆಯ ಆಧಾರದ ಮೇಲೆ ಆಯ್ಕೆ ಮಾಡುವುದಿಲ್ಲ. ಪ್ರತಿಭೆ, ದೈಹಿಕ ಸಾಮರ್ಥ್ಯ, ಕ್ರೀಡಾ ಸಾಧನೆ ಹಾಗೂ ದಾಖಲೆಗಳ ಪರಿಶೀಲನೆ ಸೇರಿದಂತೆ ಹಲವು ಹಂತಗಳ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ, ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯ ಹಂತಗಳು
1. ಆನ್‌ಲೈನ್ ಅರ್ಜಿ ಸಲ್ಲಿಕೆ
ಮೊದಲ ಹಂತದಲ್ಲಿ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
⬇
2. ದಾಖಲೆಗಳ ಪರಿಶೀಲನೆ (Document Verification)
ಸಲ್ಲಿಸಿರುವ ಕ್ರೀಡಾ ಪ್ರಮಾಣಪತ್ರಗಳು, ವ್ಯಾಸಂಗ ಪ್ರಮಾಣಪತ್ರ, ವಯಸ್ಸಿನ ದಾಖಲೆಗಳು ಹಾಗೂ ಇತರ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ.
⬇
3. ದೈಹಿಕ ಸಾಮರ್ಥ್ಯ ಪರೀಕ್ಷೆ (Battery Test)
ದಾಖಲೆಗಳು ಸರಿಯಾಗಿದ್ದರೆ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
⬇
4. ಕ್ರೀಡಾ ಕೌಶಲ್ಯ ಪರೀಕ್ಷೆ
ಆಟದ ಪ್ರಕಾರ ಅಭ್ಯರ್ಥಿಯ ಕೌಶಲ್ಯವನ್ನು ತಜ್ಞ ಕೋಚ್‌ಗಳು ಮೌಲ್ಯಮಾಪನ ಮಾಡುತ್ತಾರೆ.
⬇
5. ಅಂತಿಮ ಮೆರಿಟ್ ಪಟ್ಟಿ
ದೈಹಿಕ ಸಾಮರ್ಥ್ಯ, ಕ್ರೀಡಾ ಸಾಧನೆ ಹಾಗೂ ದಾಖಲೆಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಏನೆಲ್ಲಾ ಇರುತ್ತದೆ?
ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತ ಯಾವುದು ಅಂದ್ರ ದೈಹಿಕ ಪರೀಕ್ಷೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ದೈಹಿಕ ಕ್ಷಮತೆ, ವೇಗ, ಚುರುಕುತನ ಹಾಗೂ ಸಹಿಷ್ಣುತೆಯನ್ನು ಎಲ್ಲಾವನ್ನು ಪರೀಕ್ಷೆ ಮಾಡಿ ನೋಡುತ್ತಾರೆ.
ಪ್ರಮುಖ ಪರೀಕ್ಷೆಗಳು
▶ 30 ಮೀಟರ್ ಸ್ಪ್ರಿಂಟ್
ಅಭ್ಯರ್ಥಿಯ ಓಟದ ವೇಗವನ್ನು ಅಳೆಯಲಾಗುತ್ತದೆ.
▶ 800 ಮೀಟರ್ ಓಟ
ಸಹಿಷ್ಣುತೆಯನ್ನು ಪರೀಕ್ಷಿಸಲು ಈ ಓಟ ನಡೆಸಲಾಗುತ್ತದೆ.
▶ ಶಟಲ್ ರನ್
ಚುರುಕುತನ ಹಾಗೂ ಸಮತೋಲನವನ್ನು ಪರಿಶೀಲಿಸಲಾಗುತ್ತದೆ.
▶ ಸ್ಟ್ಯಾಂಡಿಂಗ್ ಬ್ರಾಡ್ ಜಂಪ್
ಕಾಲಿನ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ.
▶ ಮೆಡಿಸಿನ್ ಬಾಲ್ ಥ್ರೋ
ಕೈ ಹಾಗೂ ಭುಜಗಳ ಬಲವನ್ನು ಅಳೆಯಲಾಗುತ್ತದೆ.
▶ ಆಟದ ಪ್ರಾಯೋಗಿಕ ಪರೀಕ್ಷೆ
ಅಭ್ಯರ್ಥಿಯು ಆಯ್ಕೆ ಮಾಡಿಕೊಂಡಿರುವ ಕ್ರೀಡೆಯಲ್ಲಿ ನೇರ ಪ್ರದರ್ಶನ ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಅಗತ್ಯ ದಾಖಲೆಗಳ ಪಟ್ಟಿ:
- ಆಧಾರ್ ಕಾರ್ಡ್ ಕಡ್ಡಾಯ
- ಜನ್ಮ ದಿನಂಕದ ಪ್ರಮಾಣಪತ್ರ
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (ಅನ್ವಯಿಸಿದಲ್ಲಿ)
- ವರ್ಗಾವಣೆ ಪ್ರಮಾಣಪತ್ರ (TC)
- ವ್ಯಾಸಂಗ ಪ್ರಮಾಣಪತ್ರ ಅರ್ಜಿ ಹಾಕುವ ಮುಂಚೆನೆ ಸಂಬಂದಿತ ಶಾಲಾ ಶೀಕ್ಷಕರ ರುಜು ಮತ್ತು ಮೋಹರು ಮಾಡಿಸಿಕೊಂಡಿರಬೇಕು.
- ಕ್ರೀಡಾ ಸಾಧನೆಯ ಪ್ರಮಾಣಪತ್ರಗಳು
- ಬ್ಯಾಂಕ್ ಪಾಸ್‌ಬುಕ್ ಮೊದಲನೆಯ ಪುಟ
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ 1
- ಜಾತಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
- ಆದಾಯ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
- ನಿವಾಸ ಪ್ರಮಾಣಪತ್ರ ಕಡ್ಡಾಯ
ಅರ್ಜಿ ಹಾಕುವ ವಿಧಾನ
ಕರ್ನಾಟಕ ಸರ್ಕಾರ ಈ ಯೋಜನೆಗೆ ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸುತ್ತದೆ.
ಹಂತ 1
ಅಧಿಕೃತ ವೆಬ್‌ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2
ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯ ಮೂಲಕ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಿ.
ಹಂತ 3
ವೈಯಕ್ತಿಕ ಮಾಹಿತಿ ಹಾಗೂ ಶಿಕ್ಷಣದ ವಿವರಗಳನ್ನು ಸರಿಯಾಗಿ ಹಾಕಿ.
ಹಂತ 4
ನೀವು ಏನೆನ ಕ್ರೀಡಾ ಸಾಧನೆಗಳ ಮಾಡಿರುವ ಏಲ್ಲಾ ವಿವರಗಳನ್ನು ದಾಖಲಿಸಿ.
ಹಂತ 5
ಅಗತ್ಯ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
ಹಂತ 6
ಅರ್ಜಿಯನ್ನು submit ಮಾಡುವುದಕ್ಕಿಂತ ಮುಂಚೆ ಒಂದು ಸಲಾ ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ.
ಹಂತ 7
ಸ್ವೀಕೃತಿ ಪತ್ರವನ್ನು ಡೌನ್‌ಲೋಡ್ ಮಾಡಿ ಹಾಗೂ ಪ್ರಿಂಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
| ಪ್ರಕ್ರಿಯೆ | ದಿನಾಂಕ |
|---|---|
| ಅರ್ಜಿ ಆರಂಭ | 05 ಮೇ 2028 |
| ಕೊನೆಯ ದಿನಾಂಕ | 05 ಜೂನ್ 2028 |
| ಜಿಲ್ಲಾ ಮಟ್ಟದ ಪರೀಕ್ಷೆ | 15 ಜೂನ್ – 20 ಜೂನ್ 2028 |
| ಅಂತಿಮ ಮೆರಿಟ್ ಪಟ್ಟಿ | 30 ಜೂನ್ 2028 |
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
- ತಪ್ಪು ಮಾಹಿತಿ ನೀಡಬೇಡಿ.
- ನಕಲಿ ಕ್ರೀಡಾ ಪ್ರಮಾಣಪತ್ರ ಸಲ್ಲಿಸಬೇಡಿ.
- ದಾಖಲೆಗಳು ಸ್ಪಷ್ಟವಾಗಿರಬೇಕು.
- ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ.
- ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.
- ಬ್ಯಾಂಕ್ ಖಾತೆ ಆಧಾರ್‌ಗೆ ಜೋಡಣೆಯಾಗಿರಬೇಕು.
- ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪತ್ರವನ್ನು ಉಳಿಸಿಕೊಳ್ಳಿ.
ಕ್ರೀಡಾ ವಸತಿ ನಿಲಯದಲ್ಲಿ ದೊರೆಯುವ ಹೆಚ್ಚುವರಿ ಸೌಲಭ್ಯಗಳು
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ.
- ಉಚಿತ ವಸತಿ
- ಉಚಿತ ಊಟ
- ಪೌಷ್ಟಿಕ ಆಹಾರ
- ತರಬೇತಿ ಉಡುಪು
- ಕ್ರೀಡಾ ಪರಿಕರಗಳು
- ವೈದ್ಯಕೀಯ ತಪಾಸಣೆ
- ಫಿಸಿಯೋಥೆರಪಿ ಸೌಲಭ್ಯ
- ರಾಷ್ಟ್ರೀಯ ಮಟ್ಟದ ಕೋಚ್‌ಗಳಿಂದ ತರಬೇತಿ
- ಸ್ಪರ್ಧೆಗಳಲ್ಲಿ ಭಾಗವಹಿಸಲು ನೆರವು
- ಶಿಕ್ಷಣದ ಜೊತೆಗೆ ಕ್ರೀಡಾ ತರಬೇತಿ
ಈ ಯೋಜನೆಯ ಪ್ರಮುಖ ಪ್ರಯೋಜನಗಳು
ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಅವಕಾಶ ಪಡೆಯುತ್ತಾರೆ.
ಈ ಯೋಜನೆಯಿಂದ:
- ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು
- ಗ್ರಾಮೀಣ ಪ್ರತಿಭೆಗಳಿಗೆ ಉತ್ತೇಜನ
- ಉತ್ತಮ ಕ್ರೀಡಾ ತರಬೇತಿ
- ಉಚಿತ ವಸತಿ
- ಸರ್ಕಾರಿ ಬೆಂಬಲ
- ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ
- ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಗಳಲ್ಲೂ ಕ್ರೀಡಾ ಕೋಟಾದ ಪ್ರಯೋಜನ ಪಡೆಯುವ ಅವಕಾಶ
Frequently Asked Questions (FAQ)
1. ಈ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕದ ನಿವಾಸಿಯಾಗಿದ್ದು, ಕ್ರೀಡೆಯಲ್ಲಿ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2. ವಿದ್ಯಾರ್ಥಿವೇತನದ ಮೊತ್ತ ಎಷ್ಟು?
ರಾಷ್ಟ್ರಮಟ್ಟದ ಸಾಧಕರಿಗೆ ₹25,000 ಹಾಗೂ ರಾಜ್ಯಮಟ್ಟದ ಸಾಧಕರಿಗೆ ₹18,000 ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತದೆ.
3. ಕ್ರೀಡಾ ವಸತಿ ನಿಲಯದಲ್ಲಿ ಯಾವ ಸೌಲಭ್ಯಗಳು ದೊರೆಯುತ್ತವೆ?
ಉಚಿತ ವಸತಿ, ಊಟ, ಕ್ರೀಡಾ ತರಬೇತಿ, ಕ್ರೀಡಾ ಕಿಟ್, ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ.
4. ಅರ್ಜಿ ಸಲ್ಲಿಸಲು ಶುಲ್ಕ ಇದೆಯೇ?
ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಶುಲ್ಕದ ಮಾಹಿತಿ ಪ್ರಕಟಿಸಲಾಗುತ್ತದೆ.
5. ಅರ್ಜಿ ಸಲ್ಲಿಸುವ ವಿಧಾನ ಯಾವುದು?
ಅಧಿಕೃತ ವೆಬ್‌ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
Importent Links
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ವೆಬ್‌ಸೈಟ್‌ಗಳ ಮೂಲಕ ಅಧಿಕೃತ ಲಾಗಿನ್ ಪೋರ್ಟಲ್‌ಗಳನ್ನು ಪ್ರವೇಶಿಸಿ. ಇಲಾಖಾ ಯೋಜನೆಗಳು ಮತ್ತು ಸೇವೆಗಳಿಗೆ ಸೈನ್ ಇನ್ ಮಾಡಲು ಅಥವಾ ನೋಂದಾಯಿಸಲು ನೀವು ಈ ಪುಟಗಳಲ್ಲಿ ಸಂಬಂಧಿತ ‘ಆನ್‌ಲೈನ್ ಸೇವೆಗಳು’ ಅಥವಾ ‘ಸೇವಾ ಸಿಂಧು’ ವಿಭಾಗಗಳಿಗೆ ನ್ಯಾವಿಗೇಟ್ ಮಾಡಬಹುದು.
ರಾಷ್ಟ್ರೀಯ ಯುವ ಕಾರ್ಯಕ್ರಮಗಳಿಗಾಗಿ, ನಾಯಕತ್ವ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಚಟುವಟಿಕೆಗಳಿಗೆ ನೋಂದಾಯಿಸಲು ನೀವು MY ಭಾರತ್ ಪೋರ್ಟಲ್‌ಗೆ ಲಾಗಿನ್ ಆಗಬಹುದು.
ಸಮಾರೋಪ
ಕರ್ನಾಟಕ ಸರ್ಕಾರದ 2028-29ನೇ ಸಾಲಿನ ಕ್ರೀಡಾ ವಿದ್ಯಾರ್ಥಿವೇತನ ಹಾಗೂ ಸರ್ಕಾರಿ ಕ್ರೀಡಾ ವಸತಿ ನಿಲಯ ಯೋಜನೆ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಆರ್ಥಿಕ ಅಡಚಣೆಗಳಿಂದ ಕ್ರೀಡಾ ಕ್ಷೇತ್ರದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗದಂತೆ ಸರ್ಕಾರ ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉಚಿತ ವಸತಿ, ಪೌಷ್ಟಿಕ ಆಹಾರ, ಕ್ರೀಡಾ ಕಿಟ್ ಹಾಗೂ ಗುಣಮಟ್ಟದ ತರಬೇತಿಯನ್ನು ಒದಗಿಸುತ್ತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಹೊಂದಿರುವ ವಿದ್ಯಾರ್ಥಿಗಳು ಅರ್ಹತೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದರೆ ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳುವ ಉತ್ತಮ ಅವಕಾಶವನ್ನು ಪಡೆದುಕೊಳ್ಳಬಹುದು. ಈ ಯೋಜನೆ ಕೇವಲ ವಿದ್ಯಾರ್ಥಿವೇತನವಷ್ಟೇ ಅಲ್ಲ, ಭವಿಷ್ಯದ ಚಾಂಪಿಯನ್‌ಗಳನ್ನು ರೂಪಿಸುವ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
PM-ವಿದ್ಯಾಲಕ್ಷ್ಮಿ ಯೋಜನೆ 2026: ಉನ್ನತ ಶಿಕ್ಷಣಕ್ಕಾಗಿ ಜಾಮೀನು ರಹಿತ ಶಿಕ್ಷಣ ಸಾಲ – ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಭರ್ಜರಿ ಸೌಲಭ್ಯ!
ಕರ್ನಾಟಕ ಅರಣ್ಯ ಇಲಾಖೆಯಲ್ಲಿ 700 ಹುದ್ದೆಗಳ ಭರ್ಜರಿ ನೇಮಕಾತಿ 2026: PUC, SSLC ಪಾಸ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!
ಗೆಳತಿಯ ಪ್ರೇಮ ವಿವಾಹದ ಎಡವಟ್ಟಿಗೆ ಅಮಾಯಕ ಯುವಕ ಬಲಿ! ಚಿಕ್ಕಮಗಳೂರಿನ ಚಂದನ್ ಸಾವಿನ ಹಿಂದಿನ ನಿಜ ಕಥೆ ಏನು?