SSLC Result 2026: SSLC ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ, 96.18% ವಿದ್ಯಾರ್ಥಿನಿಯರು ಪಾಸ್.
ಕರ್ನಾಟಕ SSLC ಪಲಿತಾಂಶ 2026 (OUT) ಇವತ್ತು: ವಿದ್ಯಾರ್ಥಿಗಳ ನೋಂದಯಿಸಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್/ಎಸ್‌ಎಂಎಸ್ ಮೂಲಕವೂ ತಮ್ಮ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗಿದೆ. ಜತೆಗೆ ಫಲಿತಾಂಶ ಪಟ್ಟಿಯು ಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಿದೆ.
ಹೊಸಬರು: 8,12,855
ಪುನರಾವರ್ತಕರು: 62,845
ಖಾಸಗಿ ಅಭ್ಯರ್ಥಿಗಳು: 27,189
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು – 7,70,209
ಪರೀಕ್ಷಾ ಕೇಂದ್ರಗಳು: ರಾಜ್ಯಾದ್ಯಂತ 2,871
SSLC ಯಲ್ಲಿ ಶೇ 94.1 ರಷ್ಟು ಪಲಿತಾಂಶ
ಧಕ್ಷಿಣ ಕನ್ನಡ ಪ್ರಥಮ (98.18), ಉಡುಪಿ ದ್ವಿತೀಯ (98.09), ಉತ್ತರ ಕನ್ನಡ ತೃತೀಯ,ಪ್ರತಿ ವರ್ಷದಂತೆ ಈ ಸಲಾನು ಕೂಡಾ ಕಲಬುರಗಿಗೆ SSLC ಪಲಿತಾಂಶದಲ್ಲಿ ಕೊನೆಯ ಸ್ಥಾನವನ್ನ ಉಳಿಸಿಕೊಂಡಿದೆ, ಮೂವರು ವಿದ್ಯಾರ್ಥಿಗಳು 625 ಕ್ಕೆ 625 ತಗೊಂಡಿದ್ದಾರೆ.
ಪರೀಕ್ಷೆಗೆ ಹಾಜಾರಾದ ಮಕ್ಕಳು 7,70,209 ರ ಪೈಕಿ 7 ಲಕ್ಷದ 24 ಸಾವಿರದ 794 ಮಕ್ಕಳು ಪಾಸ್ ಆಗಿದ್ದಾರೆ ಎಂದು ಶಿಕ್ಷಣ ಸಚಿವರು ವಿವರಣೆ ಕೊಟ್ಟಿದ್ದಾರೆ.ಶೇ 94.1 ರಷ್ಟು ಪಲಿತಾಂಶ ಬಂದಿದೆ. SSLC ಪರೀಕ್ಷೆಯಲ್ಲಿ ಹುಡುಗಿಯರೆ ಮೇಲುಗೈ ಸಾಧಿಸಿದ್ದಾರೆ.
2025-26ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು, ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರ ನೀಡಿದ್ದು, ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿಯ ಫಲಿತಾಂಶದಲ್ಲಿ ಎಂದಿನಂತೆ ಮತ್ತೆ ದಕ್ಷಿಣ ಕನ್ನಡ ಜಿಲ್ಲೆ (98.4%) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆ (98.18%) ದ್ವಿತೀಯ ಸ್ಥಾನ ಗಳಿಸಿದ್ದು, ಉತ್ತರ ಕನ್ನಡ ಜಿಲ್ಲೆ (98.02) ಮೂರನೇ ಸ್ಥಾನ ಗಳಿಸಿದೆ. ಇನ್ನು ಹಾಸನ ಜಿಲ್ಲೆ ಶೇ 97.51 ಫಲಿತಾಂಶ ಪಡೆಯುವ ಮೂಲಕ ನಾಲ್ಕನೇ ಸ್ಥಾನ ಗಳಿಸಿದರೆ, ಮಂಡ್ಯ ಜಿಲ್ಲೆ ಶೇ 97.4 ಫಲಿತಾಂಶ ಪಡೆದು ರಾಜ್ಯಕ್ಕೆ ಐದನೇ ಸ್ಥಾನ ಗಳಿಸಿದೆ.
ಈ ಬಾರಿ 7.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, ಪರೀಕ್ಷೆ ಬರೆದ ಶೇಕಡಾ 94.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, 5 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದರು. 7.7 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 7ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೂರ್ಣ ಅಂಕ 625 ಕ್ಕೆ 625 ಪಡೆದುಕೊಂಡು ನಮ್ಮ ರಾಜ್ಯಕ್ಕೆ ಒಳ್ಳೆ ಹೆಸರು ತಂದಿದ್ದಾರೆ.
ಏಳು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. 1) ರೂಪಾ ಚನಗೌಡ ಪಾಟೀಲ (ಬೆಳಗಾವಿ),2) ಜಾನವಿ (ಹಾಸನ), 3) ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ, 4) ದಾವಣಗೆರೆಯ ಭರತ್ 625ರಲ್ಲಿ 625 ಅಂಕ, 5) ಚಿಕ್ಕಮಂಗಳೂರಿನ ಬೃಂದಾ 625ರಲ್ಲಿ 625 ಅಂಕ 6) ಚಿಕ್ಕೋಡಿಯ ಅಥಣಿ ತಾಲೂಕಿನ ಕಾಟಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ 625ಕ್ಕೆ 625 ಅಂಕ ಗಳಿಸುವ ಮೂಲಕ ಸರ್ಕಾರಿ ಶಾಲೆಗಳ ಘನತೆಯನ್ನು ಹೆಚ್ಚಿಸಿದ್ದಾರೆ.
ಧಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ. ಯಾದಗಿರಿ ಕೊನೆಯ ಸ್ಥಾನ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ 98.18 ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ 98.09), ಹಾಸನ 4ನೇ ಸ್ಥಾನ (ಶೇ 97.51) ಗಳಿಸಿವೆ. ಕಲಬುರಗಿ ರಾಜ್ಯಕ್ಕೆ ಕೊನೆ ಸ್ಥಾನ ಪಡೆದುಕೊಂಡಿದೆ. ಶೇಕಡಾ 85.06 ಫಲಿತಾಂಶ ದಾಖಲಾಗಿದೆ.
karresults.nic.in ಅಥವಾ kseab.karnataka.gov.in ಈ ಎರಡು ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ಇಷ್ಟೇ ಅಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೂ ಎಸ್‌ಎಂಎಸ್ (SMS) ಮೂಲಕ ಫಲಿತಾಂಶ ಕಳುಹಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.
ವಿಷೇಶ ಸೂಚನೆ : 1) ತೃತೀಯ ಭಾಷೆಯಲ್ಲಿ ಅನುತ್ತೀರ್ಣ ಆದ ಮಕ್ಕಳಿಗೆ ಪರೀಕ್ಷಾ ಶುಲ್ಕ ಇಲ್ಲ
ಇನ್ನೂ ಎಸ್ಎಸ್ಎಲ್ಸಿ ತೃತೀಯ ಭಾಷೆ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಅನುತ್ತೀರ್ಣ ಆದ ಮಕ್ಕಳಿಗೆ ಪರೀಕ್ಷಾ ಶುಲ್ಕ ಇರೋದಿಲ್ಲ ಎಂದಿದ್ದಾರೆ. ತೃತೀಯ ಭಾಷೆ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ತೃತೀಯ ಭಾಷೆಯಲ್ಲಿ 17 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ಅವರಿಗೆ ಯಾವುದೇ ಪರೀಕ್ಷಾ ಶುಲ್ಕ ಇರೋದಿಲ್ಲ.
2) ಮೇ.18 ರಿಂದ ಮೇ.25ಕ್ಕೆ ಎರಡನೇ ಪರೀಕ್ಷೆ
ಈ ಬಾರಿ ಶಿಕ್ಷಣ ಇಲಾಖೆ ಪ್ರಮುಖ ನಿರ್ಧಾರ ಕೈಗೊಂಡಿದೆ. ಶಿಕ್ಷಣ ಇಲಾಖೆ SSLC ಮೂರನೇ ಪರೀಕ್ಷೆ ಕೈ ಬಿಟ್ಟಿದೆ. SSLC ಎರಡನೇ ಪರೀಕ್ಷೆ ನಡೆಯಲಿದೆ. ಮೇ.18 ರಿಂದ ಮೇ.25ಕ್ಕೆ ಎರಡನೇ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ದಿನಾಂಕ ಘೋಷಣೆ ಮಾಡಿದ್ದಾರೆ.
3) ಈ ವರ್ಷ ಮೂರನೇ ಪರೀಕ್ಷೆ ಇಲ್ಲ!
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಬಂದ ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮವಾಗಿದೆ. ಕಳೆದ ಕೆಲವು ವರ್ಷಗಳ ಫಲಿತಾಂಶಕ್ಕೆ ಹೋಲಿಸಿದರೆ ಅತ್ಯುತ್ತಮವಾಗಿದೆ. ಹೀಗಾಗಿ ಇದೀಗ ಶಿಕ್ಷಣ ಇಲಾಖೆ ಈ ವರ್ಷ ಮೂರನೇ ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಘೋಷಣೆ ಮಾಡಿದೆ. ಕೇವಲ ಎರಡು ಪರೀಕ್ಷೆಗಳಿಗೆ ಸೀಮಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಫಲಿತಾಂಶ ಹೇಗಿದೆ?
ಈ ಬಾರಿ ಬೆಂಗಳೂರಿನಲ್ಲೂ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ಬೆಂಗಳೂರು ಉತ್ತರ: 95.33%
ಬೆಂಗಳೂರು ಗ್ರಾಮಾಂತರ: 95.83%
ಬೆಂಗಳೂರು ದಕ್ಷಿಣ: 91.64%
ಈ ಬಾರಿ ಗ್ರಾಮೀಣ ಮಕ್ಕಳೇ ಮೇಲುಗೈ!
2026ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಉನ್ನತ ಫಲಿತಾಂಶ ಬಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಗ್ರಾಮೀಣ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಫಲಿತಾಂಶದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ ಸೇರಿ ಎಲ್ಲಾ ಕಡೆ ಉತ್ತಮ ಫಲಿತಾಂಶ ಬಂದಿದೆ
ದಕ್ಷಿಣ ಕನ್ನಡ ರಾಜ್ಯಕ್ಕೆ ಪ್ರಥಮ, ಕಲಬುರಗಿಗೆ ಕೊನೆ ಸ್ಥಾನ
2026ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಶೇಕಡಾ 98.4 ರಷ್ಟು ಉತ್ತೀರ್ಣತೆ ದಾಖಲಿಸಿದೆ. ಇನ್ನೊಂದೆಡೆ, ಕಲಬುರಗಿ ಜಿಲ್ಲೆ ಫಲಿತಾಂಶದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊನೆಯ ಸ್ಥಾನ ಪಡೆದಿದ್ದು, ಇಲ್ಲಿ ಶೇಕಡಾ 85.06 ರಷ್ಟು ಫಲಿತಾಂಶ ದಾಖಲಾಗಿದೆ.
ಪಲಿತಾಂಶದ ವಿಳಾಸ:
ವೆಬ್ ಸೈಟ್ : https://karresults.nic.in/